ನವದೆಹಲಿ: ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಟೈಮ್ಸ್ನ ಉನ್ನತ ಶಿಕ್ಷಣ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ 2022 ರಲ್ಲಿ ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.
ಐಐಎಸ್ಸಿ 301-350 ಬ್ಯಾಂಡ್ನಲ್ಲಿ ಸತತ ಮೂರನೇ ವರ್ಷವೂ ತನ್ನ ಸ್ಥಾನವನ್ನು ಕಾಯ್ದುಕೊಂಡಿದೆ.
ಇದಲ್ಲದೆ, ಕಳೆದ ವರ್ಷದ 63 ಕ್ಕೆ ಹೋಲಿಸಿದರೆ ಈ ಬಾರಿ 71 ಭಾರತೀಯ ವಿಶ್ವವಿದ್ಯಾಲಯಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಕಳೆದ ವರ್ಷದ 1,527 ಕ್ಕೆ ಹೋಲಿಸಿದರೆ ಈ ವರ್ಷ 1,662 ವಿಶ್ವವಿದ್ಯಾಲಯಗಳು ಟೈಮ್ಸ್ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಅಲ್ಲದೇ 35 ಭಾರತೀಯ ವಿಶ್ವವಿದ್ಯಾಲಯಗಳು ಪಟ್ಟಿಯಲ್ಲಿ ಅಗ್ರ 1000 ರಲ್ಲಿ ಸ್ಥಾನ ಪಡೆದಿವೆ. ಇದು ವಿಶ್ವದಲ್ಲೇ ಎರಡನೇ ಅತಿ ಹೆಚ್ಚು.
ಐಐಟಿ-ರೋಪರ್ (351-400 ಬ್ಯಾಂಡ್) ಕಳೆದ ವರ್ಷದಂತೆ ಈ ಬಾರಿ ಭಾರತದಲ್ಲಿ ಎರಡನೇ ಸ್ಥಾನದಲ್ಲಿ ಮುಂದುವರಿದಿದೆ, ಜೆಎಸ್ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ ಪಟ್ಟಿಗೆ ಪಾದಾರ್ಪಣೆ ಮಾಡಿದೆ ಮತ್ತು 351-400 ಬ್ಯಾಂಡ್ನಲ್ಲಿ ಸ್ಥಾನ ಪಡೆದಿದೆ. ಐಐಟಿ-ಇಂದೋರ್ ನಾಲ್ಕನೇ ಸ್ಥಾನದಲ್ಲಿದೆ, 401 ಮತ್ತು 500 ರ ನಡುವೆ ಶ್ರೇಯಾಂಕ ಪಡೆದಿದೆ.
ದೆಹಲಿ, ಬಾಂಬೆ, ಖರಗ್ಪುರ ಮತ್ತು ಮದ್ರಾಸ್ ಸೇರಿದಂತೆ ಮೊದಲ ತಲೆಮಾರಿನ ಏಳು ಐಐಟಿಗಳು ಕಳೆದ ವರ್ಷದಿಂದ ಜಾಗತಿಕ ಶ್ರೇಯಾಂಕದಲ್ಲಿ ಭಾಗವಹಿಸದಿರಲು ನಿರ್ಧಾರ ಮಾಡಿವೆ ಎಂಬುದು ಗಮನೀಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.