ನವದೆಹಲಿ: ಅಟಲ್ ಪಿಂಚಣಿ ಯೋಜನಾ (ಎ.ಪಿ.ವೈ.)ವು ಭಾರತ ಸರಕಾರದ ಪಿಂಚಣಿ ಖಾತ್ರಿ ಯೋಜನೆಯಾಗಿದ್ದು, ಪಿ.ಎಫ್.ಆರ್.ಡಿ.ಎ.ಯು ಅನುಷ್ಠಾನ ಗೊಳಿಸುತ್ತಿದೆ. ಪ್ರಸಕ್ತ ಹಣಕಾಸು ವರ್ಷ 2021-22 ರಲ್ಲಿ 28 ಲಕ್ಷಕ್ಕೂ ಅಧಿಕ ಹೊಸ ಎ.ಪಿ.ವೈ. ಖಾತೆಗಳನ್ನು ತೆರೆಯಲಾಗಿದೆ. ಎ.ಪಿ.ವೈ. ಅಡಿಯಲ್ಲಿ ಒಟ್ಟು ದಾಖಲಾತಿ 2021ರ ಆಗಸ್ಟ್ 25 ರ ವೇಳೆಗೆ 3.30 ಕೋಟಿ ದಾಟಿದೆ.
ಎ.ಪಿ.ವೈ ಅಡಿಯಲ್ಲಿ 2021ರ ಆಗಸ್ಟ್ 25 ರಂದು ಇರುವ ಒಟ್ಟು ದಾಖಲಾತಿಗಳಲ್ಲಿ ಸುಮಾರು 78% ಚಂದಾದಾರರು ರೂ.1,000ದ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಂಡಿದ್ದರೆ, ಸುಮಾರು 14% ಚಂದಾದಾರರು ರೂ.5,000 ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜೊತೆಗೆ ಸುಮಾರು 44% ಮಂದಿ ಮಹಿಳಾ ಚಂದಾದಾರರಿದ್ದಾರೆ ಹಾಗು 44 % ಚಂದಾದಾರರು ಬಹಳ ಕಿರಿಯ ವಯಸ್ಸಿನಲ್ಲಿ ದಾಖಲಾತಿ ಮಾಡಿಕೊಳ್ಳುತ್ತಿದ್ದು ಅವರು 18-25 ವರ್ಷ ವಯೋಮಿತಿಗೆ ಸೇರಿದವರಾಗಿದ್ದಾರೆ.
ಇತ್ತೀಚೆಗೆ ಪಿ.ಎಫ್.ಆರ್.ಡಿ.ಎ.ಯು ಹೊಸ ಉಪಕ್ರಮಗಳನ್ನು ಕೈಗೆತ್ತಿಕೊಂಡಿದೆ. ಎ.ಪಿ.ವೈ ಮೊಬೈಲ್ ಆಪ್ ನಲ್ಲಿ ಹೊಸ ಅಂಶಗಳ ಸೇರ್ಪಡೆ ಮತ್ತು ಉಮಾಂಗ್ ವೇದಿಕೆಯಲ್ಲಿ ಅದರ ಲಭ್ಯತೆ, ಎ.ಪಿ.ವೈ. ಪದೇ ಪದೇ ಕೇಳಲ್ಪಡುವ ಪ್ರಶ್ನೆಗಳನ್ನು ಸಕಾಲಿಕಗೊಳಿಸುವುದು, ಮತ್ತು ಎ.ಪಿ.ವೈ ಯೋಜನೆಯ ವ್ಯಾಪ್ತಿಯನ್ನು ಹೆಚ್ಚಿಸಲು ಹಾಗು ಈಗಿರುವ ಚಂದಾದಾರರ ಪ್ರಯೋಜನಕ್ಕಾಗಿ ಮತ್ತು ನಿರೀಕ್ಷಿತ ಎ.ಪಿ.ಐ. ಚಂದಾದಾರರ ಮತ್ತು ಎ.ಪಿ.ವೈ. ಸೇವಾ ಒದಗಣೆದಾರರ ಅನುಕೂಲಕ್ಕಾಗಿ 13 ಪ್ರಾದೇಶಿಕ ಭಾಷೆಗಳಲ್ಲಿ ನಾಗರಿಕ ಸನ್ನದುಗಳಂತಹ ಹೊಸ ಉಪಕ್ರಮಗಳನ್ನು ಅದು ಕೈಗೆತ್ತಿಕೊಂಡಿದೆ.
ಯೋಜನೆಯ ಆರಂಭವಾದಂದಿನಿಂದ ದಾಖಲಾತಿ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದರಿಂದ ಉತ್ತೇಜಿತಗೊಂಡಿರುವ ಪಿ.ಎಫ್.ಆರ್.ಡಿ.ಎ. ಯು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ವಿವಿಧ ಎ.ಪಿ.ಐ. ಪ್ರಚಾರಾಂದೋಲನಗಳನ್ನು ಹಮ್ಮಿಕೊಳ್ಳುವ ಮೂಲಕ, ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ (ಎಸ್.ಎಲ್.ಬಿ.ಸಿ.ಗಳು) ಮತ್ತು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್.ಆರ್.ಎಲ್.ಎಂ.) ಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ, ಮುದ್ರಣ, ಸಾಮಾಜಿಕ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳು ಮತ್ತು ಇತರ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ಮಾಡುವ ಮೂಲಕ ಹಣಕಾಸು ವರ್ಷ 2021-22 ರಲ್ಲಿ ಎ.ಪಿ.ವೈ. ಅಡಿಯಲ್ಲಿ ಒಟ್ಟು ದಾಖಲಾತಿಯನ್ನು ಇನ್ನಷ್ಟು ಹೆಚ್ಚಿಸಲು ಮತ್ತು ಭಾರತವನ್ನು ಪಿಂಚಣಿಯುಕ್ತ ಸಮಾಜವನ್ನಾಗಿ ರೂಪಿಸುವ ನಿಟ್ಟಿನಲ್ಲಿ ತನ್ನ ಕೊಡುಗೆಯನ್ನು ನೀಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.