ಬುದ್ಗಾಂ: ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಧ್ಯ ಕಾಶ್ಮೀರದ ಬುದ್ಗಾಂ ಜಿಲ್ಲೆಯಲ್ಲಿ ದುರ್ಗಾದೇವಿಯ 1200 ವರ್ಷಗಳಷ್ಟು ಹಳೆಯದಾದ ಪುರಾತನ ಶಿಲ್ಪವನ್ನು ಸ್ಥಳಿಯರಿಂದ ವಶಕ್ಕೆ ಪಡೆದಿದ್ದಾರೆ.
ಶಿಲ್ಪದ ಬಗ್ಗೆ ಮಾಹಿತಿ ಪಡೆದ ನಂತರ, ಬುದ್ಗಾಂ ಪೋಲಿಸರು ಶೋಧ ನಡೆಸಿದ್ದು ಈ ಸಮಯದಲ್ಲಿ ಯರಿಖಾ ಖನ್ಸಾಹಾಬ್ ನಿವಾಸಿ ಅಬ್ದುಲ್ ರಶೀದ್ ಶೇಖ್ ಅವರ ಮಗ ನವಾಜ್ ಅಹ್ಮದ್ ಶೇಖ್ ಅವರ ಮನೆಯಲ್ಲಿ ಶಿಲ್ಪ ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಂಡಿದ್ದಾರೆ.
ಈ ಶಿಲ್ಪವು 12 ರಿಂದ 8 ಇಂಚು ಗಾತ್ರದ್ದಾಗಿದೆ, ಕಪ್ಪು ಕಲ್ಲಿನಲ್ಲಿ ಕೆತ್ತಲಾಗಿದೆ. ಇದರಲ್ಲಿ ಸಿಂಹಾಸನದ ಮೇಲೆ ದುರ್ಗಾದೇವಿಯು ಕುಳಿತಿರುವ ಭಂಗಿಯಲ್ಲಿದ್ದು, ನಾಲ್ವರು ಸೇವಕರು ಇರುವಂತೆ ಕೆತ್ತಲಾಗಿದೆ.
ಈ ಬಗ್ಗೆ ಸ್ಥಳೀಯ ಮಾಧ್ಯಮದೊಂದಿಗೆ ಮಾತನಾಡಿದ ಬುದ್ಗಾಂನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) , ತಾಹಿರ್ ಸಲೀಮ್ ಖಾನ್ ಅವರು, ಬುದ್ಗಾಂನ ಖನ್ಸಹಾಬ್ ಪ್ರದೇಶದಲ್ಲಿ ಸ್ಥಳೀಯರಿಂದ ಈ ಪುರಾತನ ಶಿಲ್ಪವನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.
ಆಗಸ್ಟ್ 13 ರಂದು ನದಿಯಿಂದ ಮರಳನ್ನು ಹೊರತೆಗೆಯುತ್ತಿದ್ದ ಕಾರ್ಮಿಕರು ಈ ಶಿಲ್ಪವನ್ನು ಜಮ್ಮುವಿನ ಶ್ರೀನಗರದ ಪಾಂಡ್ರೆಥಾನ್ ನಲ್ಲಿರುವ ಜೇಲಂನಲ್ಲಿ ಪತ್ತೆ ಮಾಡಿದ್ದರು ಎನ್ನಲಾಗಿದೆ.
ದುರ್ಗಾ ದೇವಿಯ ಈ ಶಿಲ್ಪವು ಸರಿಸುಮಾರು ಕ್ರಿಸ್ತಶಕ 7-8 ನೇ ಶತಮಾನದಷ್ಟು (ಸುಮಾರು 1200 ವರ್ಷಗಳಷ್ಟು ಹಳೆಯದು) ಎಂದು ತಿಳಿದುಬಂದಿದೆ.
ಕಪ್ಪು ಶಿಲೆಯಲ್ಲಿರುವ ಶಿಲ್ಪವನ್ನು ಈಗ ಜಮ್ಮು- ಕಾಶ್ಮೀರ ಸರ್ಕಾರದ ಆರ್ಕೈವ್ಸ್, ಆರ್ಕಿಯಾಲಜಿ ಮತ್ತು ಮ್ಯೂಸಿಯಂಗೆ ಪೋಲಿಸರು ಹಸ್ತಾಂತರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.