ನವದೆಹಲಿ: ಭಾರತ-ಕಜಕೀಸ್ಥಾನದ ಜಂಟಿ ಮಿಲಿಟರಿ ಅಭ್ಯಾಸ KAZIND-21 ಇಂದು ಕಜಕಿಸ್ಥಾನದ ಟ್ರೈನಿಂಗ್ ನೋಡ್ ಆಯಿಶಾ ಬೀಬಿಯಲ್ಲಿ ಆರಂಭವಾಗಿದೆ. ಇದು ಎರಡೂ ಸೇನೆಗಳ ವಾರ್ಷಿಕ ದ್ವಿಪಕ್ಷೀಯ ಜಂಟಿ ವ್ಯಾಯಾಮದ 5 ನೇ ಆವೃತ್ತಿಯಾಗಿದ್ದು, ಸೆಪ್ಟೆಂಬರ್ 10 ರವರೆಗೆ ಮುಂದುವರಿಯುತ್ತದೆ. ವ್ಯಾಯಾಮದ 4ನೇ ಆವೃತ್ತಿಯನ್ನು ಸೆಪ್ಟೆಂಬರ್ 2019 ರಲ್ಲಿ ಭಾರತದ ಪಿಥೋರಗಢದಲ್ಲಿ ನಡೆಸಲಾಗಿತ್ತು.
ಕಜಕಿಸ್ತಾನದ 120 ಸೈನಿಕರು ಮತ್ತು ಭಾರತೀಯ ಸೇನೆಯ 90 ಸೈನಿಕರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಎರಡೂ ತಂಡಗಳು ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯ ಕ್ಷೇತ್ರದಲ್ಲಿ ತಮ್ಮ ಪರಿಣತಿ ಮತ್ತು ಕೌಶಲ್ಯಗಳನ್ನು ಪರಸ್ಪರ ಹಂಚಿಕೊಳ್ಳಲಿವೆ. ಸೆಪ್ಟೆಂಬರ್ 8 ಮತ್ತು 9 ರಂದು ನಿಗದಿಯಾಗಿರುವ 48 ಗಂಟೆಗಳ ಜಾಯಿಂಟ್ ವಾಲಿಡೇಶನ್ ವ್ಯಾಯಾಮದಲ್ಲಿ ಈ ಸಮರಾಭ್ಯಾಸ ಮುಕ್ತಾಯಗೊಳ್ಳುತ್ತದೆ. ವಾಲಿಡೇಶನ್ ವ್ಯಾಯಾಮವು ಎರಡೂ ಸೈನ್ಯದ ಸೈನಿಕರಿಗೆ ಪರೀಕ್ಷಾ ಅವಧಿಯಾಗಿರಲಿದ್ದು, ಅವರು ಇಂತಹ ಸನ್ನಿವೇಶಗಳಲ್ಲಿ ನಿಜವಾದ ಕಾರ್ಯಾಚರಣೆಗಳ ಸವಾಲುಗಳನ್ನು ಎದುರಿಸುವ ತರಬೇತಿ ಪಡೆಯುತ್ತಾರೆ.
ಈ ವ್ಯಾಯಾಮವು ಎರಡು ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಮಿಲಿಟರಿ ಮತ್ತು ರಾಜತಾಂತ್ರಿಕ ಸಂಬಂಧಗಳಿಗೆ ಉತ್ತೇಜನ ನೀಡಲಿದೆ. ಜಂಟಿ ವ್ಯಾಯಾಮವು ಭಯೋತ್ಪಾದನೆಯನ್ನು ಎದುರಿಸಲು ಉಭಯ ರಾಷ್ಟ್ರಗಳ ಬಲವಾದ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಮತ್ತು ಇದನ್ನು ಎದುರಿಸಲು ಹೆಗಲಿಗೆ ಹೆಗಲು ಕೊಡುವ ಇಚ್ಛೆಯನ್ನು ಪ್ರತಿಬಿಂಬಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.