ನವದೆಹಲಿ: ಆನೆಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಸಿನಿಮಾ ಮಾಡಿರುವ ಪ್ರಕಾಶ್ ಮಾತಾಡ ಅವರ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರು ಶ್ಲಾಘಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, “ಆನೆಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ತಮ್ಮ ಕಾರ್ಯವನ್ನು ನನ್ನೊಂದಿಗೆ ಹಂಚಿಕೊಂಡ ಪ್ರಕಾಶ್ ಮಾತಡ ಅವರಿಗೆ ಧನ್ಯವಾದಗಳು. ಈ ವಿಷಯದ ಬಗ್ಗೆ ಅತ್ಯಂತ ಅಗತ್ಯವಿರುವ ಜಾಗೃತಿಯನ್ನು ನೀವು ಹರಡಿದ್ದೀರಿ ಮತ್ತು ಬೆಟ್ಟ ಕುರುಬ ಭಾಷೆಯಲ್ಲಿ ಈ ಕಾರ್ಯ ಮಾಡಿದ್ದು ಸಂತೋಷ ನೀಡಿದೆ” ಎಂದಿದ್ದಾರೆ.
‘ಫ್ಲೈಯಿಂಗ್ ಎಲಿಫೆಂಟ್- ಅ ಮದರ್ಸ್ ಹೋಪ್’ ಪ್ರಶಸ್ತಿ ವಿಜೇತ ಭಾರತೀಯ ಸಿನಿಮಾವಾಗಿದ್ದು, ಏಷಿಯನ್ ಆನೆಗಳ ಬಗ್ಗೆ ಇದೆ.
ಈ ಸಿನಿಮಾವನ್ನು ಗಜಶಾಸ್ತ್ರ ಎಂಬ ಪೌರಾಣಿಕ ಕಥೆಯನ್ನು ಆಧರಿಸಿ ನಿರ್ಮಿಸಲಾಗಿದೆ ಮತ್ತು ಇದನ್ನು ಬೆಟ್ಟ ಕುರುಬ ಬುಡಕಟ್ಟು ಭಾಷೆಯಲ್ಲಿ ವಿಶ್ಲೇಷಣೆ ಮಾಡಲಾಗಿದೆ.
ಆನೆಗಳ ಸಂರಕ್ಷಣೆಯ ಬಗೆಗಿನ ಭಾವನಾತ್ಮಕ ಕಥೆಯನ್ನು ಈ ಸಿನಿಮಾ ಹೊಂದಿದ್ದು, ಜಾಗೃತಿ ಮೂಡಿಸುವ ಮತ್ತು ಪ್ರಾಕೃತಿಕ ಜಗತ್ತಿನಲ್ಲಿ ಆನೆಗಳಿಗೆ ಯೋಗ್ಯ ಸ್ಥಾನವನ್ನು ಒದಗಿಸುವ ನಿಟ್ಟಿನಲ್ಲಿ ಈ ಸಿನಿಮಾ ಮಾಡಿದ ಪ್ರಯತ್ನ ಶ್ಲಾಘನೀಯವಾಗಿದೆ.
ಈ ಸಿನಿಮಾ ಜಾಕ್ಸನ್ ವೈಲ್ಡ್ ಮೀಡಿಯಾ ಅವರ್ಡ್ಸ್ನಲ್ಲಿ ‘ಬೆಸ್ಟ್ ಗ್ಲೋಬಲ್ ವಾಯ್ಸ್ ಫಿಲ್ಮ್’ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.
Thank you @prakashmatada for sharing your work on elephant conservation with me. You spread much needed awareness on the subject and am glad you do so in the Betta Kuruba language. https://t.co/Ng4DMR1ClV
— Narendra Modi (@narendramodi) September 1, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.