ಲಡಾಕ್: ಲೇಹ್ನಿಂದ ಪ್ಯಾಗಾಂಗ್ ಸರೋವರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಲಡಾಕ್ ಸಂಸದ ಜಮ್ಯಾಂಗ್ ಸೆರಿಂಗ್ ನಮಗ್ಯಾಲ್ ಅವರು ಲೋಕಾರ್ಪಣೆ ಮಾಡಿದ್ದಾರೆ.
ಈ ಮಾರ್ಗವು 18,600 ಅಡಿ ಎತ್ತರದಲ್ಲಿ ಹಾದು ಹೋಗುತ್ತಿದ್ದು, ವಿಶ್ವದ ಅತಿ ಎತ್ತರದ ಮೋಟಾರ್ ಮಾರ್ಗವಾಗಿದೆ. ಈ ರಸ್ತೆಯನ್ನು ಭಾರತೀಯ ಸೇನೆಯ 58 ಎಂಜಿನಿಯರ್ ರೆಜಿಮೆಂಟ್ನಿಂದ ನಿರ್ಮಿಸಲಾಗಿದೆ. ಲೇಹ್ನಿಂದ ಕೇಲಾ ಪಾಸ್ ದಾಟಿ ಈ ರಸ್ತೆ ಪ್ಯಾಂಗಾಂಗ್ ಸರೋವರವನ್ನು ಸೇರುತ್ತಿದೆ. ಇದು 41 ಕಿಮೀ ಪ್ರಯಾಣವನ್ನು ಕಡಿಮೆ ಮಾಡುತ್ತದೆ.
18380 ಅಡಿ ಎತ್ತರದ ಖುರ್ದುಂಗ್ಲಾ ಪಾಸ್ ವಿಶ್ವದ ಅತೀ ಎತ್ತರದ ರಸ್ತೆ ಎಂಬ ಖ್ಯಾತಿಗೆ ಈ ವರೆಗೆ ಪಾತ್ರವಾಗಿತ್ತು. ಇದೀಗ 18600 ಅಡಿ ಎತ್ತರದ ಈ ರಸ್ತೆ ವಿಶ್ವದ ಅತೀ ಎತ್ತರದ ಮೋಟರೇಬಲ್ ರಸ್ತೆ ಎಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡಿದೆ.
Strategically important road constructed by Indian Army at 18,600 ft inaugurated by @jtnladakh in presence of @Menonpgk @yakzee @StanChosphel @adgpi#Leh #Ladakh #IndianArmy #Army #Pangong
https://t.co/TX1hDUUUO7— Jamyang Tsering Namgyal (@jtnladakh) August 31, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.