ನವದೆಹಲಿ: ಕೊರೋನಾ ನಿಯಂತ್ರಣ ಹಿನ್ನೆಲೆಯಲ್ಲಿ ಆರಂಭಿಸಲಾಗಿರುವ ಲಸಿಕಾ ಅಭಿಯಾನದಲ್ಲಿ ಭಾರತವು ಮತ್ತೊಂದು ಮೈಲಿಗಲ್ಲು ಸಾಧಿಸಿದೆ.
ಮತ್ತೊಮ್ಮೆ ಒಂದೇ ದಿನದಲ್ಲಿ 1 ಕೋಟಿಗೂ ಅಧಿಕ ಕೊರೋನಾ ಲಸಿಕೆ ನೀಡುವ ಮೂಲಕ ಭಾರತ ಸರ್ಕಾರ ಮತ್ತೆ ಸಾಧನೆ ಮೆರೆದಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ದೇಶದಲ್ಲಿ ಒಂದೇ ದಿನದಲ್ಲಿ ಒಂದು ಕೋಟಿಗೂ ಅಧಿಕ ಲಸಿಕೆ ನೀಡುವ ಮೂಲಕ ಭಾರತ ದಾಖಲೆ ಬರೆದಿತ್ತು. ಇದೀಗ ಇಂದು ಒಂದೇ ದಿನದಲ್ಲಿ ಮತ್ತೊಮ್ಮೆ ಒಂದು ಕೋಟಿ ಜನರಿಗೆ ಕೊರೋನಾ ಲಸಿಕೆ ಒದಗಿಸುವ ಮೂಲಕ ಭಾರತ ಸಾಧನೆ ಮಾಡಿದೆ.
ದೇಶದಲ್ಲಿ ಕೊರೋನಾ ನಿಯಂತ್ರಣ ಹಿನ್ನೆಲೆಯಲ್ಲಿ ಸ್ವದೇಶಿ ಲಸಿಕೆಗಳನ್ನು 18 ವರ್ಷ ಮೇಲ್ಪಟ್ಟವರಿಗೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿತ್ತು. ಇದೀಗ ಈ ಅಭಿಯಾನಕ್ಕೆ ಭಾರತ ಸರ್ಕಾರ ಮತ್ತಷ್ಟು ವೇಗ ನೀಡುತ್ತಿದ್ದು, ಎಲ್ಲರಿಗೂ ತ್ವರಿತವಾಗಿ ಲಸಿಕೆ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ.
1⃣ Crore, 2⃣ Times, in 5⃣ days
Congratulations, as India administers another 1 crore #COVID19 vaccinations today
Highest one-day record of 1.09 crore vaccine doses achieved till 6 pm – and still counting!
Under PM @NarendraModi ji, India is fighting strongly against corona. pic.twitter.com/ByEECsn1T5
— Mansukh Mandaviya (@mansukhmandviya) August 31, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.