ನವದೆಹಲಿ: 2021 – 22 ನೇ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಎಪ್ರಿಲ್ – ಜೂನ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿಯು 20.1% ಗಳಷ್ಟು ಬೆಳವಣಿಗೆಯಾಗಿದೆ.
ಕಳೆದ ಬಾರಿಗಿಂತ ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಆರ್ಥಿಕತೆಯ ಬೆಳವಣಿಗೆಯಾಗಿದೆ ಎಂದು ಇಂದು ಬಿಡುಗಡೆಯಾದ ದತ್ತಾಂಶವು ಮಾಹಿತಿ ನೀಡಿದೆ. ದೇಶದ ಉತ್ಪಾದನಾ ವಲಯವು ಈ ಬೆಳವಣಿಗೆಗೆ ಹೆಚ್ಚಿನ ಉತ್ತೇಜನ ನೀಡಿದೆ. ಈ ಸಂಬಂಧ ಸುದ್ದಿ ಸಂಸ್ಥೆ ರಾಯಿಟರ್ಸ್ ನಡೆಸಿದ 41 ಅರ್ಥಶಾಸ್ತ್ರಜ್ಞರ ಸಮೀಕ್ಷೆಯ ಪ್ರಕಾರ ಭಾರತದ ಜಿಡಿಪಿಯು 2021 ರ ಎಪ್ರಿಲ್ – ಜೂನ್ ತಿಂಗಳ ಸಂದರ್ಭದಲ್ಲಿ 20% ಗಳಷ್ಟು ಬೆಳವಣಿಗೆ ಕಾಣಬಹುದು ಎಂದು ನಿರೀಕ್ಷಿಸಲಾಗಿತ್ತು.
ಈ ಬಗ್ಗೆ ರಾಷ್ಟ್ರೀಯ ಅಂಕಿ ಅಂಶಗಳ ಕಚೇರಿಯು ಆಗಸ್ಟ್ 31 ರಂದು ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಕ್ಯೂ 1 ಗಾಗಿ ಸೇರಿಸಲಾದ ನೈಜ ಮೌಲ್ಯ ಒಟ್ಟು 18.8% ಗೆ ಏರಿಕೆಯಾಗಿದೆ. ಕೊರೋನಾ ಕಾರಣದಿಂದ ಈ ಹಿಂದಿನಂತೆ ಆರ್ಥಿಕತೆಯ ಚೇತರಿಕೆ ತೀಕ್ಷ್ಣವಾಗಿಲ್ಲ. ಮೇ ತಿಂಗಳಲ್ಲಿ ದೊಡ್ಡ ಪ್ರಮಾಣದ ಕೊರೋನಾ ಅಲೆಯ ಹೊಡೆತದಿಂದ ನಿರೀಕ್ಷಿತ ಪ್ರಮಾಣದಲ್ಲಿ ಜಿಡಿಪಿ ಬೆಳವಣಿಗೆ ಸಾಧ್ಯವಾಗಿರಲಿಲ್ಲ.
Indian economy continues to recover. GDP growth rate in Q1 2021-22 touched 20.1%. #IndiaBouncesBack pic.twitter.com/RMsis8l70x
— MyGovIndia (@mygovindia) August 31, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.