ನವದೆಹಲಿ: ಜುಲೈ 2021 ರವರೆಗಿನ ಭಾರತ ಸರ್ಕಾರದ ಮಾಸಿಕ ಖಾತೆಯನ್ನು ಕ್ರೋಡೀಕರಿಸಲಾಗಿದ್ದು ವರದಿಗಳನ್ನು ಪ್ರಕಟಿಸಲಾಗಿದೆ.
ಜುಲೈ, 2021 ರ ವರೆಗೆ ಭಾರತ ಸರ್ಕಾರವು ರೂ. 6,83,297 ಕೋಟಿಗಳನ್ನು (ಬಜೆಟ್ ಅಂದಾಜು (ಬಿಇ) 2021-22 ರ ಅನುಗುಣವಾಗಿ ಒಟ್ಟು ಸ್ವೀಕೃತಿಗಳು 34.6%) ಪಡೆದಿದ್ದು, ಇದು ರೂ. 5,29,189 ಕೋಟಿ ತೆರಿಗೆ ಆದಾಯ (ನೆಟ್ ಟು ಸೆಂಟರ್ – ಕೇಂದ್ರಕ್ಕೆ ನಿವ್ವಳ), ರೂ. 1,39,960 ಕೋಟಿ ತೆರಿಗೆ ರಹಿತ ಆದಾಯ ಮತ್ತು ರೂ. 14,148 ಕೋಟಿ ಸಾಲ ರಹಿತ ಬಂಡವಾಳದ ಸ್ವೀಕೃತಿಗಳನ್ನು ಒಳಗೊಂಡಿದೆ. ಸಾಲ ರಹಿತ ಬಂಡವಾಳ ಸ್ವೀಕೃತಿಗಳು ರೂ. 5,777 ಕೋಟಿ ಮರುಪಾವತಿ ಮತ್ತು ಮರುಹೂಡಿಕೆ ಆದಾಯ ರೂ. 8,371 ಕೋಟಿ ಒಳಗೊಂಡಿದೆ. ರೂ. 1,65,064 ಕೋಟಿಯನ್ನು ರಾಜ್ಯ ಸರ್ಕಾರಗಳಿಗೆ ಜುಲೈ 2021 ರ ವರೆಗೆ ಭಾರತ ಸರ್ಕಾರವು ತೆರಿಗೆ ಹಂಚಿಕೆಯ ಭಾಗವಾಗಿ ವರ್ಗಾಯಿಸಿದೆ.
ಭಾರತ ಸರ್ಕಾರವು ಮಾಡಿದ ಒಟ್ಟು ವೆಚ್ಚವು ರೂ. 10,04,440 ಕೋಟಿ (ಬಜೆಟ್ ಅಂದಾಜು (ಬಿಇ) 2021-22 ರ ಅನುಗುಣವಾಗಿ 28.8%), ಅದರಲ್ಲಿ ರೂ.8,76,012 ಕೋಟಿ ಆದಾಯದ ಖಾತೆಗೆ ಮತ್ತು ರೂ. 1,28,428 ಕೋಟಿ ಬಂಡವಾಳ ಖಾತೆಗೆ ಸೇರಿವೆ. ಒಟ್ಟು ರಾಜಸ್ವ ವೆಚ್ಚದಲ್ಲಿ ರೂ. 2,25,817 ಕೋಟಿ ಬಡ್ಡಿ ಪಾವತಿ ಮತ್ತು ರೂ. 1,20,069 ಕೋಟಿ ಪ್ರಮುಖ ಸಬ್ಸಿಡಿಗಳಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.