ಟೊಕಿಯೋ: ಜಪಾನ್ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತೀಯ ಆಟಗಾರರು ತಮ್ಮ ಪದಕಗಳ ಬೇಟೆಯನ್ನು ಮುಂದುವರಿಸಿದ್ದಾರೆ.
ಭಾರತದ ಹೈಜಂಪ್ ಆಟಗಾರರಾದ ಮರಿಯಪ್ಪನ್ ತಂಗವೇಲು ಅವರಿಗೆ ಬೆಳ್ಳಿ ಪದಕ ಮತ್ತು ಶರದ್ ಕುಮಾರ್ ಅವರಿಗೆ ಕಂಚಿನ ಪದಕ ದೊರೆತಿದೆ.
ಈ ಇಬ್ಬರು ಕ್ರೀಡಾಪಟುಗಳ ಸಾಧನೆಗೆ ಮೆಚ್ಚುಗೆ ಸೂಚಿಸಿ ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದು, ಭಾರತ ಮತ್ತಷ್ಟು ಎತ್ತರಕ್ಕೇರುತ್ತಿದೆ. ಮರಿಯಪ್ಪನ್ ತಂಗವೇಲು ಅವರ ಸ್ಥಿರತೆ ಮತ್ತು ಶ್ರೇಷ್ಠತೆಗೆ ಈ ಪದಕ ಸಮನಾರ್ಥಕವಾಗಿದೆ. ಬೆಳ್ಳಿ ಪದಕ ಗೆದ್ದ ಅವರಿಗೆ ಅಭಿನಂದನೆಗಳು. ಅವರ ಸಾಧನೆಗೆ ಭಾರತ ಹೆಮ್ಮೆ ಪಡುತ್ತದೆ ಎಂದು ತಿಳಿಸಿದ್ದಾರೆ.
Soaring higher and higher!
Mariyappan Thangavelu is synonymous with consistence and excellence. Congratulations to him for winning the Silver Medal. India is proud of his feat. @189thangavelu #Paralympics #Praise4Para pic.twitter.com/GGhtAgM7vU
— Narendra Modi (@narendramodi) August 31, 2021
ಹಾಗೆಯೇ, ಶರದ್ ಕುಮಾರ್ ಅವರು ಕಂಚಿನ ಪದಕ ಗೆಲ್ಲುವ ಮೂಲಕ ಪ್ರತಿಯೊಬ್ಬ ಭಾರತೀಯನ ಮುಖದಲ್ಲಿ ನಗು ತಂದಿದ್ದಾರೆ. ಅವರ ಪಯಣ ಹಲವರಿಗೆ ಪ್ರೇರಣೆ. ಅವರಿಗೆ ಅಭಿನಂದನೆಗಳು ಎಂದು ಮೋದಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.
The indomitable @sharad_kumar01 has brought smiles on the faces of every Indian by winning the Bronze Medal. His life journey will motivate many. Congratulations to him. #Paralympics #Praise4Para pic.twitter.com/uhYCIOoohy
— Narendra Modi (@narendramodi) August 31, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.