ಬೆಂಗಳೂರು: ರೈತರಿಗೆ ಆತ್ಮಸ್ಥೈರ್ಯ ತುಂಬುವಂತೆ ಮಾಡಲು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರ ಕನಸಿನ ಕಾರ್ಯಕ್ರಮ “ರೈತರೊಂದಿಗೊಂದು ದಿನ” ಮತ್ತೆ ಮುಂದುವರೆಯಲಿದೆ.
ಕೊರೋನಾ ಹಿನ್ನಲೆಯಲ್ಲಿ ಇಷ್ಟು ದಿನಗಳ ಕಾಲ ರೈತರೊಂದಿಗೆ ಕಾಲ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇದೀಗ ಕೋವಿಡ್ ಜೊತೆಗೆ ಬದುಕುವಂತಹ ಪರಿಸ್ಥಿತಿ ಇದೆ. ಹೀಗಾಗಿ ಮತ್ತೆ ರೈತರೊಂದಿಗೆ ಒಂದು ದಿನ ಮುಂದುವರೆಸಿ ರೈತರಲ್ಲಿ ಮತ್ತೆ ಆತ್ಮವಿಶ್ವಾಸ ಹಾಗೂ ಮಿಶ್ರ ಬೆಳೆ ರೈತರ ಆದಾಯದ ದ್ವಿಗುಣ ಸಂಬಂಧ ಪ್ರೋತ್ಸಾಹ ಸೇರಿದಂತೆ ಅನ್ನದಾತರ ಶ್ರೇಯೋಭಿವೃದ್ಧಿ ಕೃಷಿ ಪ್ರಗತಿಗೆ ಮತ್ತೆ ಜಿಲ್ಲೆಗಳಿಗೆ ತೆರಳಿ ರೈತರೊಂದಿಗೊಂದು ದಿನ ಕಾರ್ಯಕ್ರಮ ಮಾಡಲಾಗುವುದು ಎಂದು ಹೇಳಿದ್ದಾರೆ.
ಮಳೆ ಮದ್ಯದಲ್ಲಿ ಕೊಂಚ ಕೈ ಕೊಟ್ಟು ಸಮಸ್ಯೆ ಆಗಿತ್ತಾದರೂ ಯಾವುದೇ ಒಣ ಬೆಳೆಗಳಿಗೆ ಸಮಸ್ಯೆ ಇಲ್ಲ. ಬೀಜ, ಗೊಬ್ಬರದ ಸಮಸ್ಯೆ ಈ ವರ್ಷ ಆಗಿಲ್ಲ. ಎಲ್ಲಾ ಭಾಗದಲ್ಲೂ ಉತ್ತಮ ಮಳೆಯಾಗಿದೆ. ರೈತರೊಂದಿಗೆ ಇಡೀ ದಿನ ಕಳೆದಾಗ ಅವರ ಸಮಸ್ಯೆಗಳ ಬಗ್ಗೆ ಇನ್ನಷ್ಟು ಮಾಹಿತಿ ನೈಜ ವಿವರ ಲಭ್ಯವಾಗಲಿದೆ. ಸ್ಥಳದಲ್ಲಿಯೇ ಸಾಧ್ಯವಾಗುವಂತಹ ಸಮಸ್ಯೆಗಳನ್ನು ಅಧಿಕಾರಿಗಳಿಂದ ಬಗೆಹರಿಸಲಾಗುವುದು ಎಂದು ನುಡಿದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.