ಟೊಕಿಯೋ: ಜಪಾನ್ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತೀಯ ಕ್ರೀಡಾಪಟು ಸಿಂಗ್ರಾಜ್ ಅಧಾನಾ ಅವರು ದೇಶಕ್ಕೆ ಮತ್ತೊಂದು ಕಂಚಿನ ಪದಕವನ್ನು ಗೆದ್ದು ಕೊಟ್ಟಿದ್ದಾರೆ.
ಪುರುಷರ 10 ಮೀ. ಏರ್ ಪಿಸ್ತೂಲ್ ಎಚ್ಎಸ್ 1 ನಲ್ಲಿ ಶೂಟರ್ ಸಿಂಗ್ರಾಜ್ ಅವರು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
216.8 ಪಾಯಿಂಟ್ಗಳನ್ನು ಗಳಿಸುವ ಮೂಲಕ ಸಿಂಗ್ರಾಜ್ ಅವರು ಈ ಸಾಧನೆ ಮೆರೆದಿದ್ದಾರೆ ಆ ಮೂಲಕ ಪ್ಯಾರಾಲಿಂಪಿಕ್ಸ್ನಲ್ಲಿ ಈ ವರೆಗೆ ಭಾರತಕ್ಕೆ ಒಟ್ಟು 8 ಪದಕಗಳು ಲಭಿಸಿದಂತಾಗಿದೆ.
ಇನ್ನು ಸಿಂಗ್ರಾಜ್ ಅವರ ಸಾಧನೆಗೆ ಪ್ರಧಾನಿ ಮೋದಿ ಅವರು ಶುಭಾಶಯ ತಿಳಿಸಿ ಟ್ವೀಟ್ ಮಾಡಿದ್ದು, ಸಿಂಗ್ರಾಜ್ ಅವರದ್ದು ಅದ್ಭುತ ಪ್ರದರ್ಶನ. ಪ್ರತಿಭಾವಂತ ಶೂಟರ್ ದೇಶಕ್ಕೆ ಕಂಚಿನ ಪದಕ ತಂದಿದ್ದಾರೆ. ಅವರು ಬಹಳ ಶ್ರಮ ವಹಿಸಿ ಈ ಸಾಧನೆ ಮಾಡಿದ್ದಾರೆ. ಅವರಿಗೆ ಅಭಿನಂದನೆಗಳು, ಅವರ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು ಎಂದು ಹೇಳಿದ್ದಾರೆ.
Exceptional performance by Singhraj Adhana! India’s talented shooter brings home the coveted Bronze Medal. He has worked tremendously hard and achieved remarkable successes. Congratulations to him and best wishes for the endeavours ahead. #Paralympics #Praise4Para pic.twitter.com/l49vgiJ9Ax
— Narendra Modi (@narendramodi) August 31, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.