ನವದೆಹಲಿ: ಪ್ರಧಾನಿ ಮೋದಿ ಅವರ ಪರಿಕಲ್ಪನೆಯ ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಬಲ ತುಂಬಲು, ಭಾರತೀಯ ಭೂಸೇನೆಯು ಸ್ವದೇಶಿ ನಿರ್ಮಿತ ಸುಮಾರು 14 ಸಾವಿರ ಕೋಟಿ ರೂ. ಮೌಲ್ಯದ ವಿವಿಧ ಪರಿಕರಗಳನ್ನು ಖರೀದಿ ಮಾಡುವುದಾಗಿ ತಿಳಿಸಿದೆ.
ಆಕಾಶ್-ಎಸ್ ಕ್ಷಿಪಣಿಯ ಎರಡು ರೆಜಿಮೆಂಟ್, 25 ಸುಧಾರಿತ ಲಘು ಹೆಲಿಕಾಪ್ಟರ್ಗಳನ್ನು ಖರೀದಿ ಮಾಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ರಕ್ಷಣಾ ಇಲಾಖೆಗೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸಂಬಂಧ ಶೀಘ್ರದಲ್ಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಮ್ಮುಖದಲ್ಲಿ ನಡೆಯಲಿರುವ ಸಭೆಯಲ್ಲಿ ನಿರ್ಧಾರಗಳನ್ನು ಕೈಗೊಳ್ಳುವುದಾಗಿಯೂ ಮೂಲಗಳು ಹೇಳಿವೆ.
ಆಕಾಶ್ ಕ್ಷಿಪಣಿಯ ಸುಧಾರಿತ ರೂಪ ಆಕಾಶ್-ಎಸ್ ಶತ್ರುಗಳ ಯುದ್ಧ ವಿಮಾನವನ್ನು, ಕ್ಷಿಪಣಿಗಳನ್ನು 25 -30 ಕಿಮೀ ದೂರದಿಂದಲೇ ಹೊಡೆದುರುಳಿಸಬಲ್ಲ ಸಾಮರ್ಥ್ಯ ಹೊಂದಿದೆ. ಹಾಗೆಯೇ ಡಿಆರ್ಡಿಒ ಅಭಿವೃದ್ಧಿ ಮಾಡಿರುವ ಕ್ಷಿಪಣಿ ಗುಡ್ಡಗಾಡು, ದುರ್ಗಮ ಪ್ರದೇಶಗಳಲ್ಲಿಯೂ ಸುಲಭವಾಗಿ ಬಳಕೆ ಮಾಡಲು ಸಾಧ್ಯವಿದೆ. ಲಡಾಕ್ನಂತಹ ಚಳಿಯ ಪ್ರದೇಶದಲ್ಲಿಯೂ ಈ ಕ್ಷಿಪಣಿ ಪರಿಣಾಮಕಾರಿಯಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 25 ಧ್ರುವ ಮಾರ್ಕ್ 3 ಎಎಲ್ಎಚ್ ಗಸ್ತು ಹೆಲಿಕಾಪ್ಟರ್ಗಳನ್ನು ಸಹ ಸೇನೆ ಖರೀದಿ ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.