ನವದೆಹಲಿ: ಜಪಾನ್ನ ಟೊಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ನಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದು ವಿಶ್ವ ದಾಖಲೆ ಬರೆದ ಭಾರತೀಯ ಸ್ಪರ್ಧಿ ಸುಮಿತ್ ಅಂಟಿಲ್ ಅವರಿಗೆ ಕರೆ ಮಾಡಿ ಪ್ರಧಾನಿ ಮೋದಿ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿರುವ ಅವರು, ನಮ್ಮ ಕ್ರೀಡಾಪಟುಗಳು ಪ್ಯಾರಾಲಿಂಪಿಕ್ಸ್ನಲ್ಲಿ ಮಿಂಚುತ್ತಲೇ ಇದ್ದಾರೆ. ಪ್ಯಾರಾಲಿಂಪಿಕ್ಸ್ನಲ್ಲಿ ಸುಮಿತ್ ಅಂಟಿಲ್ ಅವರು ನಿರ್ಮಿಸಿದ ದಾಖಲೆಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಚಿನ್ನದ ಪದಕ ಗೆದ್ದ ಸುಮಿತ್ಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
Our athletes continue to shine at the #Paralympics! The nation is proud of Sumit Antil’s record-breaking performance in the Paralympics.
Congratulations Sumit for winning the prestigious Gold medal. Wishing you all the best for the future.— Narendra Modi (@narendramodi) August 30, 2021
ಸಚಿವ ಅನುರಾಗ್ ಠಾಕೂರ್ ಅವರು ವಿಡಿಯೋವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
That special moment
when India’s 🇮🇳 Prime Minister
calls to congratulate you…Just after you’ve won the #Paralympics
GOLD🥇 and broken the world record…Well Done Sumit Antil !#Praise4Para #Cheer4India
| @narendramodi @Media_SAI @PIB_India | pic.twitter.com/pZapR2bbAm
— Anurag Thakur (@ianuragthakur) August 30, 2021
ಹರ್ಯಾಣ ರಾಜ್ಯದ ಸೋನಿಪತ್ನವರಾದ ಸುಮಿತ್ ಅವರು 23 ವರ್ಷದವರಾಗಿದ್ದು, 2015 ರಲ್ಲಿ ಸಂಭವಿಸಿದ ಮೋಟಾರ್ ಬೈಕ್ ಅಪಘಾತದಲ್ಲಿ ಎಡಗಾಲು ಕಳೆದುಕೊಂಡಿದ್ದರು. ಇವರು ಈ ಹಿಂದೆ ಜಾವೆಲಿನ್ ಥ್ರೋ ನಲ್ಲಿ ಮಾಡಿದ್ದ ದಾಖಲೆಯನ್ನು ಈ ಪ್ಯಾರಾಲಿಂಪಿಕ್ಸ್ನಲ್ಲಿ ಮುರಿದು ಮತ್ತೆ ಸಾಧನೆ ಮೆರೆದಿದ್ದಾರೆ. ಇವರ ಈ ಸಾಧನೆಗೆ ಇಡೀ ದೇಶವೇ ಅಭಿನಂದನೆಗಳನ್ನು ಸಲ್ಲಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.