ನವದೆಹಲಿ: ಜಪಾನಿನ ಟೊಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ನಲ್ಲಿ ಮಹಿಳಾ 10 ಮೀ. ಏರ್ ರೈಫಲ್ ಶೂಟಿಂಗ್ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಭಾರತೀಯ ಕ್ರೀಡಾಪಟು ಅವನಿ ಲೇಖರ್ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಅವನಿ ಲೇಖರ್ ಅವರದ್ದು ಅಸಾಧಾರಣ ಪ್ರದರ್ಶನ. ಚಿನ್ನದ ಪದಕಕ್ಕೆ ಅರ್ಹರಾದ ನಿಮಗೆ ಅಭಿನಂದನೆಗಳು. ನಿಮ್ಮ ಶ್ರಮ ಮತ್ತು ಶೂಟಿಂಗ್ ಕಡೆಗಿನ ಉತ್ಸಾಹ ಅಮೋಘವಾದದ್ದು. ಭಾರತೀಯರಿಗೆ ಈ ಕ್ಷಣ ವಿಶೇಷವಾದದ್ದು. ನಿಮ್ಮ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು ಎಂದು ತಿಳಿಸಿದ್ದಾರೆ.
ಹಾಗೆಯೇ ನಿನ್ನೆ ಟೇಬಲ್ ಟೆನ್ನಿಸ್ನಲ್ಲಿ ಬೆಳ್ಳಿ ಪದಕ ಪಡೆದ ಭವಿನಾ ಪಟೇಲ್, ಹೈಜಂಪ್ನಲ್ಲಿ ಬೆಳ್ಳಿ ಗೆದ್ದ ನಿಶದ್ ಕುಮಾರ್, ಡಿಸ್ಕಸ್ ಎಸೆತದಲ್ಲಿ ಕಂಚು ಗೆದ್ದ ವಿನೋದ್ ಕುಮಾರ್, ಇಂದು ಡಿಸ್ಕಸ್ ಎಸೆತದಲ್ಲಿ ಬೆಳ್ಳಿ ಗೆದ್ದ ಯೋಗೇಶ್ ಕಥುನಿಯಾ, ಜಾವೆಲಿನ್ ಥ್ರೋದಲ್ಲಿ ಬೆಳ್ಳಿ ಗೆದ್ದ ದೇವೇಂದ್ರ, ಜಾವೆಲಿನ್ ಥ್ರೋನಲ್ಲಿ ಕಂಚು ಗೆದ್ದ ಸುಂದರ್ ಸಿಂಗ್ ಗುರ್ಜಾರ್ ಅವರಿಗೂ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.
ಇಂದು ಮುಂಜಾನೆ ಅವನಿ ಅವರು ಶೂಟಿಂಗ್ನಲ್ಲಿ ಚಿನ್ನದ ಪದಕ ತಮ್ಮದಾಗಿಸುವ ಮೂಲಕ ದೇಶದ ಹಿರಿಮೆಯನ್ನು ಹೆಚ್ಚಿಸಿದ್ದರು. ಈ ಬಾರಿಯ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತಕ್ಕೆ ಒಂದು ಚಿನ್ನ, ನಾಲ್ಕು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳು ಲಭಿಸಿವೆ.
Phenomenal performance @AvaniLekhara! Congratulations on winning a hard-earned and well-deserved Gold, made possible due to your industrious nature and passion towards shooting. This is truly a special moment for Indian sports. Best wishes for your future endeavours.
— Narendra Modi (@narendramodi) August 30, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.