ನವದೆಹಲಿ: ಅಹಮದಾಬಾದ್ನ ಔಷಧ ತಯಾರಿಕಾ ಸಂಸ್ಥೆ ಕ್ಯಾಡಿಲಾ ಹೆಲ್ತ್ಕೇರ್ (ಝೈಡಸ್ ಕ್ಯಾಡಿಲಾ) ದ ಮೂರು ಡೋಸ್ ಕೊರೋನಾ ಲಸಿಕೆ ZyCoV-D ವನ್ನು ದೇಶದಲ್ಲಿ ತುರ್ತು ಬಳಕೆ ಮಾಡಲು ಭಾರತೀಯ ಔಷಧ ನಿಯಂತ್ರಣ ಮಂಡಳಿಯ ತಜ್ಞರ ಸಮಿತಿ ಶಿಫಾರಸ್ಸು ಮಾಡಿದೆ.
ಈ ಲಸಿಕೆಯು ರಾಷ್ಟ್ರೀಯ ಔಷಧ ನಿಯಂತ್ರಕದಿಂದ ಅನುಮೋದನೆ ಪಡೆದಲ್ಲಿ, ಹೈದರಾಬಾದ್ನ ಭಾರತ್ ಬಯೋಟೆಕ್ನ ಬಳಿಕ ಭಾರತದಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದ ಎರಡನೇ ಸ್ವದೇಶೀ ಲಸಿಕೆ ಎಂಬ ಹಿರಿಮೆಗೆ ಪಾತ್ರವಾಗಲಿದೆ.
ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ನ ಕೊರೋನಾ ಸಂಬಂಧಿಸಿದಂತೆ ತಜ್ಞರ ಸಮಿತಿ ಝೈಡಸ್ ಕ್ಯಾಡಿಲಾ ಅನುಮೋದನೆಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ್ದು, ಆ ಬಳಿಕ ಇದರ ಬಳಕೆಗೆ ಶಿಫಾರಸು ಮಾಡಿದೆ. ಸಂಸ್ಥೆಯ ಮೂರು ಡೋಸ್ ಕೊರೋನಾ ಲಸಿಕೆಯನ್ನು ತುರ್ತು ಬಳಕೆಗೆ ಅನುಮೋದನೆ ನೀಡುವಂತೆ ಡಿಸಿಜಿಐಗೆ ಶಿಫಾರಸ್ಸು ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.