ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಹರಿ ಪರ್ಬತ್ ಕೋಟೆಯ ಸಮೀಪ 100 ಅಡಿಯ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸಲಿದೆ.
ಈ ಧ್ವಜವನ್ನು ಆಗಸ್ಟ್ 10 ರಂದು ದೇಶಕ್ಕೆ ಸಮರ್ಪಣೆ ಮಾಡಲಾಗುತ್ತದೆ. ಇದನ್ನು ಕಾಶ್ಮೀರದ ಅತೀ ಎತ್ತರದ ಧ್ವಜ ಎಂದು ಪರಿಗಣಿಸಲಾಗಿದೆ. ಫೆಬ್ರವರಿ 7 ರಂದು ಈ ತ್ರಿವರ್ಣ ಧ್ವಜದ ಅಡಿಪಾಯವನ್ನು ಸ್ಥಾಪಿಸಲಾಯಿತು.
ಈ ಧ್ವಜವನ್ನು ಭಾರತೀಯ ಸೇನೆ ಮತ್ತು ಸೋಲಾರ್ ಇಂಡಸ್ಟ್ರೀಸ್ ಲಿ. ಸ್ಥಾಪಿಸಿದ್ದು, ದಾಖಲೆಯ ಸಮಯದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಅನುಮತಿ ಪಡೆದಿದ್ದಾರೆ. ಈ ಧ್ವಜ ಗುಲ್ಮಾರ್ಗ್ನಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗುವ ಸಾಧ್ಯತೆ ಇದೆ ಎಂದು ಇದನ್ನು ರಚನೆ ಮಾಡಿರುವವರ ಅಭಿಪ್ರಾಯವಾಗಿದೆ.
ಈ ಸಂಬಂಧ ಸೋಲಾರ್ ಇಂಡಸ್ಟ್ರೀಸ್ ಇಂಡಿಯಾ ಲಿ. ನ ಹಿರಿಯ ಕಾರ್ಯನಿರ್ವಾಹಕ ರಮಿತ್ ಅರೋರಾ ಮಾತನಾಡಿದ್ದು, ದೊಡ್ಡ ಸಾಧನೆಗಳು ಸಣ್ಣ ಸಣ್ಣ ವಿಚಾರಗಳಿಂದಲೇ ಆರಂಭವಾಗುತ್ತದೆ. ಈ ಸಾಂಕೇತಿಕ, ಸಾಂಪ್ರದಾಯಿಕ ಧ್ವಜವನ್ನು ಕಾಶ್ಮೀರದ ಕಣಿವೆಯಲ್ಲಿ ಸ್ಥಾಪಿಸಲಾಗುವುದು. ಭಾರತೀಯ ಸೇನೆ ಈ ಕಾರ್ಯದಲ್ಲಿ ಪಾಲು ಪಡೆಯಲು ನಮ್ಮನ್ನು ಸಂಪರ್ಕಿಸಿತು. ಇದೊಂದು ಉದಾತ್ತ ಪ್ರಯತ್ನವಾಗಿದ್ದು, ಈ ಧ್ವಜವನ್ನು ಕಾಶ್ಮೀರ ಮತ್ತು ಇಡೀ ದೇಶದ ಜನತೆಗೆ ಸಮರ್ಪಿಸಲಾಗುತ್ತದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.