ಭಾರತದ ಹಿಂದೂಗಳು ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಸನಾತನ ಹಿಂದೂ ಧರ್ಮದ ಬಗ್ಗೆ, ದೇವರ ಬಗ್ಗೆ, ದೇಶದ ಬಗ್ಗೆ, ದೇಶಪ್ರೇಮಿಗಳ ವಿರುದ್ಧ ಮಾತನಾಡುವವರು, ದೇಶದ್ರೋಹದಲ್ಲಿ ತೊಡಗಿರುವವರ ವಿರುದ್ಧ ಇಲ್ಲಿನ ಹಿಂದೂ ಜನರು ನಾವೆಲ್ಲರೂ ಒಂದು ಎಂಬಂತೆ ತೊಡೆ ತಟ್ಟಿದರೆ, ಎಂತಹ ಕುತಂತ್ರಿಯೂ ಬಾಲ ಮುದುರಲೇ ಬೇಕು. ಮತ್ತೆ ಬಾಲ ಬಿಚ್ಚುವ ಹುಚ್ಚು ಸಾಹಸಕ್ಕೆ ಕೈಹಾಕದಂತೆ ಅವರ ಹೆಡೆಮುರಿ ಕಟ್ಟುವ ಶಕ್ತಿ ಹಿಂದೂಗಳಿಗಿದೆ.
ಇದಕ್ಕೆ ಸ್ಪಷ್ಟ ನಿದರ್ಶನ ಎಂಬಂತೆ ಕನ್ಯಾಕುಮಾರಿಯ ಹಿಂದೂಗಳು ಮಹತ್ವದ ನಿರ್ಣಯವೊಂದನ್ನು ಮಾಡಿದ್ದಾರೆ. ಕ್ಯಾಥೋಲಿಕ್ ಚರ್ಚ್ನ ಡೈರಿಯ ಹಾಲನ್ನು ಬಹಿಷ್ಕರಿಸುವ ಮೂಲಕ ಮಹತ್ವದ ನಡೆಗೆ ಸಾಕ್ಷಿಯಾಗಿದ್ದಾರೆ. ಚರ್ಚ್ನ ಪಾದ್ರಿ ಜಾರ್ಜ್ ಪೊನ್ನಯ್ಯ ಎಂಬಾತ ಭಾರತ ಮಾತೆ, ಪ್ರಧಾನಿ ಮೋದಿ, ಅಮಿತ್ ಶಾ ಅವರ ವಿರುದ್ಧ ತನ್ನ ಎಲುಬಿಲ್ಲದ ನಾಲಿಗೆಯಲ್ಲಿ ಅವಹೇಳನಕಾರಿ ಭಾಷಣ ಮಾಡಿದ ನಂತರ ಚರ್ಚ್ನ ಡೈರಿ ಪ್ಲಾಂಟ್ನ ಹಾಲನ್ನು ಬಹಿಷ್ಕಾರ ಮಾಡುವ ಮೂಲಕ ಸ್ವಾಭಿಮಾನಿ ಹಿಂದೂಗಳನ್ನು ಕೆಣಕಿದರೆ ಆಗಬಹುದಾದ ಪರಿಣಾಮದ ಬಿಸಿಯನ್ನು ಚರ್ಚ್ಗೆ ಮುಟ್ಟಿಸಿದ್ದಾರೆ ಎಂಬುದು ಸಂತಸದ ವಿಚಾರ.
ಪಾದ್ರಿ ಪೊನ್ನಯ್ಯ ಭಾರತದ ಬಗ್ಗೆ, ಹಿಂದೂಗಳ ದೇವರ ಬಗ್ಗೆ ಅತ್ಯಂತ ಕೀಳು ಮಟ್ಟದಲ್ಲಿ ಭಾಷಣ ಬಿಗಿದಿದ್ದ. ಈತನ ಈ ದುರ್ವರ್ತನೆಯನ್ನು ವಿರೋಧಿಸಿ ರಾಜ್ಯದ ವಿವಿದ ಭಾಗಗಳಲ್ಲಿ ಹಿಂದೂಗಳು ನಡೆಸಿದ ಪ್ರತಿಭಟನೆ, ಆತನ ವಿರುದ್ಧ ದಾಖಲಾದ ದೂರುಗಳು ಇವನ ಮಾತಿನ ತೀಕ್ಷ್ಣತೆ ಹಿಂದೂಗಳನ್ನು ಯಾವ ಮಟ್ಟಿಗೆ ನೋಯಿಸಿರಬಹುದು ಎಂಬುದಕ್ಕೆ ಜ್ವಲಂತ ಸಾಕ್ಷಿ. ದೊಡ್ಡ ಪ್ರಮಾಣದ ಪ್ರತಿಭಟನೆಗಳ ಬಳಿಕ ಆತನ ಬಂಧನ, ಬಳಿಕ ಆತನ ಆರೋಗ್ಯ ಅಸಮತೋಲನದ ಕಾರಣಕ್ಕೆ ಆಸ್ಪತ್ರೆಗೆ ದಾಖಲಾದ ಘಟನೆಗಳೂ ನಡೆದಿವೆ. ಏನೇ ಆದರೂ ಹಿಂದೂಗಳ ಒಗ್ಗಟ್ಟು ಆತನನ್ನು ಬಂಧನಕ್ಕೆ ಒಳಪಡಿಸಿದ್ದು ಮಾತ್ರ ಇಡೀ ದೇಶಕ್ಕೆ ಹಿಂದೂ ಸಮಾಜ ಒಗ್ಗಟ್ಟಾದರೆ ದೇಶದ್ರೋಹಿಗಳ, ಸಾಮರಸ್ಯ ಕದಡುವವರ ಪರಿಸ್ಥಿತಿ ಏನಾಗುತ್ತದೆ ಎಂಬುದಕ್ಕೆ ಸ್ಪಷ್ಟ ನಿದರ್ಶನವೂ ಹೌದು ಎನ್ನುವುದನ್ನು ಗಟ್ಟಿ ಧ್ವನಿಯಲ್ಲಿ ಹೇಳಬಹುದು.
ಸಮಾಜ ವಿದ್ರೋಹಿ ಪಾದ್ರಿಯ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಪರಿಣಾಮ ಚರ್ಚ್ನ ಡೈರಿಯ ಹಾಲಿನ ಉದ್ಯಮಕ್ಕೂ ಕುತ್ತು ಬಿತ್ತು. ಆ ಬಳಿಕ ಹಿಂದೂ ಶಕ್ತಿ, ಹಿಂದೂಗಳ ಒಗ್ಗಟ್ಟಿನ ವಿರುದ್ಧ ಸಾಗಿದರೆ ತೊಂದರೆ ಎಂಬುದು ಕಟ್ಟಿಟ್ಟ ಬುತ್ತಿ ಎಂಬುದನ್ನು ಅರಿತ ನಂಜಿಲ್ ಇಂಟಿಗ್ರೇಟೆಡ್ ಡೈರಿ ಡೆವಲಪ್ಮೆಂಟ್ ಕಂಪೆನಿ ಆ ಪಾದ್ರಿಗೂ, ಸಂಸ್ಥೆಗೂ ನಡುವೆ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಸ್ಪಷ್ಟೀಕರಣ ನೀಡುವ ಮೂಲಕ ತನ್ನ ಉದ್ಯಮವನ್ನು ಉಳಿಸಿಕೊಳ್ಳುವ ಪ್ರಯತ್ನ ಸಹ ಮಾಡಿದೆ. ಹಾಗೆಯೇ ಚರ್ಚ್ಗೆ ಸಂಬಂಧಿಸಿದಂತೆ ಕುಝಿತುರೈ ಚರ್ಚ್ ಬಿಷಪ್ ಆಡಳಿತದಲ್ಲಿದೆ ಮತ್ತು ಇತರ ಆಡಳಿತಾತ್ಮಕ ಉದ್ದೇಶಗಳಿಗಾಗಿ ಮತ್ತೊಬ್ಬ ಪಾದ್ರಿಯನ್ನು ನೇಮಕ ಮಾಡಿರುವುದಾಗಿಯೂ ಅದು ಸಾರ್ವಜನಿಕರಿಗೆ ತಿಳಿಸಿದೆ. ಆ ಮೂಲಕ ಅನಗತ್ಯ ನಾಲಿಗೆ ಹರಿಯಬಿಟ್ಟರೆ ಹಿಂದೂಗಳು ಸುಮ್ಮನೆ ಕೂರುವವರಲ್ಲ. ಕೋಮು ದಳ್ಳುರಿ ಹಚ್ಚುವವರ ಮೇಲೆ ಅದೇ ಕಿಡಿ ಪರಿಣಾಮ ಬೀರುವಂತೆ ಮಾಡುವ ಕಲೆಯನ್ನು ಸಹ ಸ್ವಾಭಿಮಾನಿ ಹಿಂದೂಗಳು ತಿಳಿದಿದ್ದಾರೆ ಎಂಬ ಸ್ಪಷ್ಟ ಸಂದೇಶ ರವಾನಿಸುವ ಮೂಲಕ ಪಾದ್ರಿ ಪೊನ್ನಯ್ಯನ ಜೊತೆಗೆ ಅಂತಹ ಇನ್ನೂ ಹಲವು ಸಮಾಜ ವಿಘಟಕರಿಗೆ ನಾಟುವಂತೆ, ಮುಟ್ಟಿ ನೋಡುವಂತೆ ಉತ್ತರ ನೀಡಿದ್ದಾರೆ ಎಂಬುದು ನಿಸ್ಸಂಶಯ.
ಪಾದ್ರಿ ಪೊನ್ನಯ್ಯನಂತಹ ಕುತಂತ್ರಿಗಳು ಡೈರಿ ಪ್ಲಾಂಟ್ ಮೂಲಕ ಗಳಿಸಿದ ಲಾಭವನ್ನು ಹಿಂದೂ ಮಕ್ಕಳ ಬ್ರೈನ್ವಾಷ್ ಮಾಡಿ, ಅವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಕಾರ್ಯಕ್ಕೆ ಬಳಕೆ ಮಾಡುತ್ತಿದ್ದಾರೆ. ಈ ಸತ್ಯ ಇದೀಗ ಕನ್ಯಾಕುಮಾರಿಯ ಹಿಂದವೀ ಸಮುದಾಯಕ್ಕೆ ಅರಿವಾಗಿದೆ. ಇದಕ್ಕೆ ತಕ್ಕ ಉತ್ತರ ನೀಡಿರುವ ಅಲ್ಲಿನ ಹಿಂದೂ ಜನತೆ ಚರ್ಚ್ನ ಡೈರಿ ಉತ್ಪನಗಳನ್ನು ಬಹಿಷ್ಕಾರ ಮಾಡುವ ಮೂಲಕ ದಿಟ್ಟ ಹೆಜ್ಜೆ ಇರಿಸಿದ್ದಾರೆ.
ಕನ್ಯಾಕುಮಾರಿಯ ಹಿಂದೂಗಳು ಪಾದ್ರಿ, ಆತನನ್ನೊಳಗೊಂಡಂತೆ ಇನ್ನಿತರರು ಆಡಳಿತ ನಡೆಸುತ್ತಿದ್ದ ಡೈರಿ ಉತ್ಪನ್ನಗಳನ್ನು ಬಹಿಷ್ಕಾರ ಮಾಡುವ ಮೂಲಕ ಡೈರಿಗೆ ಆರ್ಥಿಕ ಹೊಡೆತ ನೀಡಿದ್ದಾರೆ. ಜೊತೆಗೆ ಹಿಂದೂಗಳು ಮನಸ್ಸು ಮಾಡಿದರೆ ಯಾವುದು ಸಹ ಅಸಾಧ್ಯ ಅಲ್ಲ ಎಂಬುದಕ್ಕೆ ಉದಾಹರಣೆಯಾಗಿ ನಿಂತಿದ್ದಾರೆ. ಇವರು ತೆಗೆದುಕೊಂಡ ಈ ದಿಟ್ಟ ನಿಲುವು ಇಡೀ ದೇಶದ ಹಿಂದೂಗಳಿಗೆ ದಾರಿದೀಪವಾಗಬೇಕು. ಆ ಮೂಲಕ ಸಮಾಜ ವಿರೋಧಿ, ಸಾಮರಸ್ಯ ವಿರೋಧಿ ಪಾದ್ರಿ ಪೊನ್ನಯ್ಯನಂತಹ ಹಲವು ಕ್ರಿಮಿಗಳಿಗೆ ಮತ್ತೆ ಹಿಂದೂ ಧರ್ಮದ ಬಗ್ಗೆ, ದೇಶದ ಬಗ್ಗೆ, ದೇವರ ಬಗ್ಗೆ, ದೇಶಪ್ರೇಮಿ ನಾಯಕರ ಬಗ್ಗೆ ಉಸಿರೆತ್ತುವುದಕ್ಕೂ ಭಯವಾಗುವಂತೆ ವಾತಾವರಣ ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ಹಿಂದೂಸ್ಥಾನದ ದೇಶಪ್ರೇಮಿಗಳ ಚಿತ್ತ ಹರಿಯಲಿ ಎಂಬ ಆಶಯದ ಜೊತೆಗೆ..
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.