ನವದೆಹಲಿ: ಅಂತರರಾಷ್ಟ್ರೀಯ ಹುಲಿ ದಿನದಂದು ಹುಲಿಗಳ ಸಂರಕ್ಷಣೆಯ ಬಗ್ಗೆ ಕಾಳಜಿ ಹೊಂದಿರುವ ಜನರಿಗೆ ಪ್ರಧಾನಿ ಮೋದಿ ಅವರು ಶುಭಾಶಯ ತಿಳಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಇಂಟರ್ನ್ಯಾಷನಲ್ ಟೈಗರ್ ಡೇ ಪ್ರಯುಕ್ತ ವನ್ಯಜೀವಿ ಪ್ರಿಯರಿಗೆ, ಅದರಲ್ಲೂ ವಿಶೇಷವಾಗಿ ಹುಲಿ ಸಂರಕ್ಷಣೆ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವವರಿಗೆ ಶುಭಾಶಯಗಳು. ಹುಲಿಗಳ ಸುರಕ್ಷಿತ ಆವಾಸಗಳನ್ನು ಖಾತರಿ ಪಡಿಸಿಕೊಳ್ಳುವ, ಹುಲಿ ಸ್ನೇಹಿ ಪರಿಸರ ವ್ಯವಸ್ಥೆಯನ್ನು ಪೋಷಿಸುವ ನಿಟ್ಟಿನಲ್ಲಿ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇನೆ ಎಂದು ಹೇಳಿದ್ದಾರೆ.
ಹಾಗೆಯೇ, ಭಾರತದ 18 ರಾಜ್ಯಗಳಲ್ಲಿ 51 ಹುಲಿ ನಿಕ್ಷೇಪಗಳು ಇವೆ. 2018 ರ ಬಳಿಕ ಹುಲಿ ಗಣತಿಯಲ್ಲಿ ಅವುಗಳ ಸಂಖ್ಯೆ ಏರಿಕೆಯಾಗಿರುವುದು ಕಂಡು ಬಂದಿದೆ. ಹುಲಿ ಸಂರಕ್ಷಣೆಗೆ ಸಂಬಂಧಿಸಿದಂತೆ ಸೇಂಟ್ ಪೀಟರ್ಬರ್ಗ್ ಘೋಷಿಸಿದ ವೇಳಾಪಟ್ಟಿಗಿಂತ ನಾಲ್ಕು ವರ್ಷಗಳ ಮೊದಲೇ ಭಾರತ ಹುಲಿಗಳ ಸಂಖ್ಯೆ ದ್ವಿಗುಣಗೊಳಿಸುವ ಗುರಿ ಸಾಧಿಸಿದೆ ಎಂದು ಹೇಳಿದ್ದಾರೆ.
ಹುಲಿ ಸಂರಕ್ಷಣೆಗೆ ಸಂಬಂಧಿಸಿದಂತೆ ಭಾರತದ ಕಾರ್ಯಯೋಜನೆ ಸ್ಥಳೀಯ ಸಮುದಾಯಗಳನ್ನು ಒಳಗೊಳ್ಳುವಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ. ಸಸ್ಯ ಮತ್ತು ಜೀವ ರಾಶಿಗಳ ಜೊತೆ ಅನ್ಯೋನ್ಯತೆಯಿಂದ ಬದುಕುವ ನಮ್ಮ ಹಳೆಯ ಪರಂಪರೆಯಿಂದಲೂ ನಾವು ಸ್ಫೂರ್ತಿ ಪಡೆದಿದ್ದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ.
India’s strategy of tiger conservation attaches topmost importance to involving local communities. We are also inspired by our centuries old ethos of living in harmony with all flora and fauna with whom we share our great planet. pic.twitter.com/WSwvPprNuJ
— Narendra Modi (@narendramodi) July 29, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.