ನವದೆಹಲಿ: 2022 ರಲ್ಲಿ ಮಾನವ ರಹಿತ ಚಂದ್ರಯಾನ ಉಡಾವಣೆ ಮಾಡುವ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
2021 ರಲ್ಲಿ ಮಾನವ ರಹಿತ ಚಂದ್ರಯಾನ ಮಿಷನ್ ಉಡಾವಣೆಯಾಗಬೇಕಿತ್ತು. ಆದರೆ ಕೊರೋನಾ ಸಾಂಕ್ರಾಮಿಕದಿಂದಾದ ಈ ಉಡಾವಣೆ ನಡೆಸಲು ತೊಂದರೆಗಳಾಗಿವೆ. 2022 ರ ತ್ರೈಮಾಸಿಕದಲ್ಲಿ ಈ ಉಡಾವಣೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಮುಂದಿನ ಸಾಮಾನ್ಯ ಕೆಲ ಕಾರ್ಯಗಳ ಅರಿವನ್ನು ಊಹಿಸಿಕೊಂಡು 2022 ರ ಮೂರನೇ ತ್ರೈಮಾಸಿಕದಲ್ಲಿ ಈ ಉಡಾವಣೆ ನಡೆಯಲಿದೆ. ಕೊರೋನಾ ಲಾಕ್ಡೌನ್ ಕ್ರಮಗಳು ಅನ್ಲಾಕ್ ಬಳಿಕ ಮತ್ತೆ ಚಂದ್ರಯಾನ – 3 ಯೋಜನಾ ಕಾರ್ಯಗಳು ಪುನರಾರಂಭವಾಗಿದೆ ಯೋಜನೆ ಪ್ರಬುದ್ಧ ಹಂತದಲ್ಲಿದೆ ಎಂದು ಅವರು ಹೇಳಿದ್ದಾರೆ. ಇದರ ವಿನ್ಯಾಸ, ವಿಶ್ಲೇಷಣೆ, ಡಾಕ್ಯುಮೆಂಟೇಶನ್ಗಳನ್ನು ಇಸ್ರೋ ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.