ಬಿಹಾರ: ರಾಜ್ಯದ ಸಮಷ್ಟಿಪುರದ ಗ್ರೀನ್ ಪಾಠಶಾಲಾ ಎಂಬ ಕೋಚಿಂಗ್ ಸೆಂಟರ್ ಒಂದು ಇದೀಗ ಸುದ್ದಿಯಲ್ಲಿದೆ. ಇದರ ಶುಲ್ಕ ವ್ಯವಸ್ಥೆಯೇ ಈ ಕೋಚಿಂಗ್ ಸೆಂಟರ್ ಅನ್ನು ಇತರ ಕೋಚಿಂಗ್ ಸೆಂಟರ್ಗಳಿಗಿಂತ ಭಿನ್ನವಾಗಿ, ಮಾದರಿಯಾಗಿ ಸಮಾಜದೆದುರು ತೆರೆದಿಟ್ಟಿದೆ.
ಈ ಗ್ರೀನ್ ಪಾಠಶಾಲಾವನ್ನು 33 ವರ್ಷದ ರಾಜೇಶ್ ಕುಮಾರ್ ಸುಮನ್ ಎಂಬವರು ನಡೆಸುತ್ತಿದ್ದಾರೆ. ಇಲ್ಲಿ ಸರ್ಕಾರಿ ಸೇವಾ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆಯುವವರಿಗೆ ಅಧ್ಯಯನ ಸಾಮಗ್ರಿಗಳನ್ನು ಒದಗಿಸುವಲ್ಲಿಯೂ ಈ ಕೇಂದ್ರ ಕೆಲಸ ಮಾಡುತ್ತಿದೆ.
ಇನ್ನು ಈ ಕೋಚಿಂಗ್ ಸೆಂಟರ್ ತನ್ನ ವಿಶಿಷ್ಟ ಶುಲ್ಕ ವ್ಯವಸ್ಥೆಯ ಕಾರಣಕ್ಕೆ ಹೆಸರು ಪಡೆದಿದೆ. ಇಲ್ಲಿಗೆ ತರಬೇತಿ ಪಡೆಯಲು ಬರುವ ಅಭ್ಯರ್ಥಿಗಳಿಗೆ 18 ಸಸಿಗಳನ್ನು ಶುಲ್ಕವಾಗಿ ವಿಧಿಸಲಾಗುತ್ತದೆ.
ಈ ಕೋಚಿಂಗ್ ಸೆಂಟರ್ ಸ್ಥಾಪಿಸುವ ರಾಜೇಶ್ ಕನಸಿಗೆ ನೀರೆರೆದವರು ಅವರ ಮಾವ. ಅವರಿಂದ ಪ್ರೇರಿತರಾಗಿ ದೀನದಲಿತರಿಗೆ ನೆರವಾಗುವ ನಿಟ್ಟಿನಲ್ಲಿ ರಾಜೇಶ್ ಇಂತಹ ಒಂದು ವಿನೂತನ ಕೋಚಿಂಗ್ ಸೆಂಟರ್ ಆರಂಭಿಸಿದ್ದಾರೆ. ಮಾವನ ನೆನಪಿಗಾಗಿ ಬಿನೋದ್ ಸ್ಮೃತಿ ಸ್ಟಡಿ ಕ್ಲಬ್ ಅಡಿಯಲ್ಲಿ ಕೋಚಿಂಗ್ ಕೇಂದ್ರ ಆರಂಭಿಸುತ್ತಾರೆ. ಇಲ್ಲಿ ಬಡವರಿಗೆ ಗುಣಮಟ್ಟದ ಶಿಕ್ಷಣ ಒದಗಿಸಲಾಗುತ್ತಿದೆ. ಹಾಗೆಯೇ ದೇಶದ ಪ್ರತಿಷ್ಠಿತ ಪರೀಕ್ಷೆಗಳಿಗೆ ತರಬೇತಿ ಸಹ ನೀಡಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ.
ಇಲ್ಲಿ ತರಬೇತಿ ಪಡೆಯಲು ಬಯಸುವವರಿಂದ 18 ಸಸ್ಯಗಳನ್ನು ಶುಲ್ಕವಾಗಿ ಪಡೆಯಲಾಗುತ್ತದೆ. ಓರ್ವ ವ್ಯಕ್ತಿ ತಮ್ಮ ಜೀವಿತಾವಧಿಯಲ್ಲಿ18 ಸಸ್ಯಗಳು ಉತ್ಪಾದಿಸುವಷ್ಟು ಪ್ರಮಾಣದ ಆಕ್ಸಿಜನ್ ಸೇವನೆ ಮಾಡುತ್ತಾನೆ. ಆದ್ದರಿಂದ 18 ಸಸ್ಯಗಳನ್ನು ಶುಲ್ಕವಾಗಿ ಪಡೆಯಲಾಗುತ್ತದೆ. ಬಳಿಕ ಅವುಗಳನ್ನು ವಿವಿಧ ಸ್ಥಳಗಳಲ್ಲಿ ನೆಡಲಾಗುತ್ತದೆ. ಹಾಗೆಯೇ ರಾಜೇಶ್ ಅವರು ಭಾನುವಾರದ ರಜಾ ಅವಧಿಯಲ್ಲಿ ಸಾರ್ವಜನಿಕರಲ್ಲಿ ಸಸ್ಯ ಸಂವರ್ಧನೆ, ನಿಟ್ಟಿನಲ್ಲಿ ಪ್ರವಾಸ ಕೈಗೊಳ್ಳುತ್ತಾರೆ. ಇದುವರೆಗೆ ಸುಮಾರು 90,000 ಕ್ಕೂ ಹೆಚ್ಚು ಗಿಡಗಳನ್ನು ವಿದ್ಯಾರ್ಥಿಗಳಿಂದ ಶುಲ್ಕವಾಗಿ ಪಡೆದು ಅದನ್ನು ನೆಡಲಾಗಿದೆ. ಆ ಮೂಲಕ ಮರಗಿಡಗಳನ್ನು ಉಳಿಸುವ ನಿಟ್ಟಿನಲ್ಲಿ ಮಹತ್ವದ ಕಾರ್ಯವನ್ನು ಮಾಡುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.
Rajesh Kumar Suman takes unique admission fees in return for his coaching classes. Read on! #TransformingIndia pic.twitter.com/D8hDFAbMOg
— MyGovIndia (@mygovindia) July 27, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.