ನವದೆಹಲಿ: ಗುಜರಾತ್ನ ಹರಪ್ಪನ್ ನಗರದ ಧೋಲವಿರವನ್ನು ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಆ ಮೂಲಕ ಭಾರತದ 40 ತಾಣಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಂತಾಗಿದೆ.
ಧೋಲವಿರವನ್ನು ಯುನೆಸ್ಕೋ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಸಲಾಗಿರುವ ಬಗ್ಗೆ ಯುಎನ್ನ ಕಲ್ಚರಲ್ ಬಾಡಿ ಇಂದು ದೃಢಪಡಿಸಿದೆ.
ಈ ಸಂಬಂಧ ಅಧಿಕೃತವಾಗಿ ಟ್ವೀಟ್ ಮಾಡಿರುವ ಯುನೆಸ್ಕೋ, ಭಾರತದ ಹರಪ್ಪನ್ ನಗರದ ಧೋಲವಿರವನ್ನು ಯುನೆಸ್ಕೋ ವರ್ಲ್ಡ್ ಹೆರಿಟೇಜ್ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಅಭಿನಂದನೆಗಳನ್ನು ಸಲ್ಲಿಸಿದೆ.
ಚೀನಾದಲ್ಲಿ ನಡೆದ ಯುನೆಸ್ಕೋ ಹೆರಿಟೇಜ್ ಕಮಿಟಿಯ 44 ನೇ ಅಧಿವೇಶನದಲ್ಲಿ ತೆಲಂಗಾಣದ ರಾಮಪ್ಪ ದೇವಾಲಯ, ಗುಜರಾತ್ನ ಧೋಲವಿರಗಳನ್ನು ಯುನೆಸ್ಕೋ ವರ್ಲ್ಡ್ ಹೆರಿಟೇಜ್ ಲಿಸ್ಟ್ ನಲ್ಲಿ ಸೇರಿಸಲು ನಿರ್ಧಾರ ಕೈಗೊಂಡಿದ್ದಾಗಿ ಮೂಲಗಳು ಹೇಳಿವೆ.
ಹರಪ್ಪನ್ ನಾಗರಿಕತೆಯು ಸಿಂಧೂ ಕಣಿವೆ ನಾಗರಿಕತೆಗೆ ಸೇರಿದ ಐದು ದೊಡ್ಡ ನಾಗರಿಕತೆಗಳಲ್ಲಿ ಒಂದಾಗಿದೆ. 1968 ರಲ್ಲಿ ಈ ತಾಣ ಪತ್ತೆಯಾಗಿದ್ದು ವಿಶೇಷ ಕಲ್ಲಿನ ರಚನೆಗಳಿಂದ ಪ್ರಸಿದ್ಧಿ ಪಡೆದಿದೆ.
🔴 BREAKING!
Dholavira: A Harappan City, in #India🇮🇳, just inscribed on the @UNESCO #WorldHeritage List. Congratulations! 👏
ℹ️ https://t.co/X7SWIos7D9 #44WHC pic.twitter.com/bF1GUB2Aga
— UNESCO 🏛️ #Education #Sciences #Culture 🇺🇳 (@UNESCO) July 27, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.