ನವದೆಹಲಿ: ಕೊರೋನಾ ಸೋಂಕಿನ ವಿರುದ್ಧ ಕೊರೋನಾ ಲಸಿಕೆಗಳು 97.4% ಗಳಷ್ಟು ಪರಿಣಾಮ ಬೀರುತ್ತವೆ ಎಂದು ನವದೆಹಲಿಯ ಇಂದ್ರಪ್ರಸ್ಥ ಅಪೊಲೋ ಆಸ್ಪತ್ರೆ ನಡೆಸಿದ ಅಧ್ಯಯನ ವರದಿ ತಿಳಿಸಿದೆ.
ಕೊರೋನಾ ಲಸಿಕೆ ಪಡೆದ ಆರೋಗ್ಯ ಕಾರ್ಯಕರ್ತರಲ್ಲಿ ಕೊರೋನಾ ಸೋಂಕು ತಗುಲುವ ಸಂಭವನೀಯತೆ ಮತ್ತು ರೋಗದ ತೀವ್ರತೆಯನ್ನು ವಿಶ್ಲೇಷಣೆ ಮಾಡಲು ಅಪೋಲೋ ಆಸ್ಪತ್ರೆ ಅಧ್ಯಯನ ನಡೆಸಿದ್ದು, ಈ ಅಧ್ಯಯನದ ಫಲಿತಾಂಶದ ವರದಿಯಲ್ಲಿ ಕೊರೋನಾ ಲಸಿಕೆಗಳು 97.4% ಪರಿಣಾಮಕಾರಿ ಎಂದು ತಿಳಿಸಿದೆ.
2480 ಜನರು ಎರಡೂ ಡೋಸ್ ಕೊರೋನಾ ಲಸಿಕೆಗಳನ್ನು ಪಡೆದಿದವರು ಮತ್ತು 755 ಮಂದಿ ಮೊದಲ ಡೋಸ್ ಹಾಕಿಸಿಕೊಂಡ ಆರೋಗ್ಯ ಸಿಬ್ಬಂದಿಗಳನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಲಸಿಕೆ ಹಾಕಿಸಿಕೊಂಡವರಲ್ಲಿ ರೋಗದ ಲಕ್ಷಣಗಳಾಗಲಿ, ಅಡ್ಡ ಪರಿಣಾಮಗಳಾಗಲಿ ಕಾಣಿಸಿಕೊಂಡಿಲ್ಲ ಎಂದು ಅಧ್ಯಯನ ತಿಳಿಸಿದೆ. ಕೊರೋನಾ ಲಸಿಕೆಗಳು ಸಂಪೂರ್ಣ ಸುರಕ್ಷಿತ ಎಂಬುದಕ್ಕೆ ಈ ಅಧ್ಯಯನ ಸಾಕ್ಷಿ ನೀಡಿದೆ.
ಹಾಗೆಯೇ ಕೊರೋನಾ ಲಸಿಕೆ ಪಡೆದಿದ್ದರೂ, ಕೊರೋನಾ ಸೋಂಕಿನ ಲಕ್ಷಣಗಳು ಕೆಲ ರೋಗಿಗಳಲ್ಲಿ ಕಂಡು ಬಂದಿದ್ದರೂ, ತೀವ್ರ ಮಟ್ಟಕ್ಕೆ ತಲುಪಿಲ್ಲ ಎಂದು ಅಧ್ಯಯನ ವರದಿ ಹೇಳಿದೆ. ಅಧ್ಯಯನಕ್ಕೆ ಒಳಪಟ್ಟ ಆರೋಗ್ಯ ಕಾರ್ಯಕರ್ತರಲ್ಲಿ ಕೆಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರೂ, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯಬೇಕಾದ ಅಗತ್ಯತೆ ಕಂಡು ಬಂದಿಲ್ಲ ಎಂದು ಈ ವರದಿ ಸ್ಪಷ್ಟಪಡಿಸಿದೆ.
ಹಾಗೆಯೇ ಪುರುಷರಿಗಿಂತ ಮಹಿಳೆಯರಿಗೆ ಸೋಂಕು ತಗುಲುವ ತೀವ್ರತೆ 1.84% ಹೆಚ್ಚಾಗಿದೆ. ಹೆಚ್ಚು ಸಂಖ್ಯೆಯಲ್ಲಿ ಶುಶ್ರೂಷಕರಾಗಿ ಮಹಿಳೆಯರೇ ರೋಗಿಗಳನ್ನು ನೋಡಿಕೊಳ್ಳುತ್ತಿರುವುದು ಇದಕ್ಕೆ ಕಾರಣವಾಗಿರಬಹುದು. ಅರೆವೈದ್ಯಕೀಯ, ಆಡಳಿತ, ಸಹಾಯಕ ಸಿಬ್ಬಂದಿಗಳಿಗೆ ಹೋಲಿಕೆ ಮಾಡಿದರೆ ವೈದ್ಯಕೀಯ ಮತ್ತು ಶುಶ್ರೂಷಾ ಸಿಬ್ಬಂದಿಗೆ ಸೋಂಕು ತಗುಲುವ ಸಾಧ್ಯತೆ ಅಧಿಕ ಎಂದು ಈ ವರದಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.