ನವದೆಹಲಿ: ಕೊರೋನಾದಿಂದಾಗಿ ದೇಶದಲ್ಲಿನ ರೈತರು ಬೆಳೆದ ಬೆಳೆಗಳಿಗೆ ಬೇಡಿಕೆ ಇಲ್ಲದಂತಾಗಿ ಸಂಕಷ್ಟ ಅನುಭವಿಸುವಂತಾಗಿತ್ತು.
ಈ ನಿಟ್ಟಿನಲ್ಲಿ ಹಲವು ರಾಜ್ಯಗಳು ರಫ್ತಿಗೆ ಮುಂದಾಗಿದ್ದವು. ಅದೇ ನಿಟ್ಟಿನಲ್ಲಿ ಉತ್ತರಾಖಂಡ್ನಲ್ಲಿ ಕೂಡ ರಫ್ತಿಗೆ ಉತ್ತೇಜನ ನೀಡಿದ್ದು ಅಲ್ಲಿನ ರೈತರು ಬೆಳೆದ ಬೆಳೆಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್ನ ದುಬೈಗೆ ರಫ್ತು ಮಾಡಲಾಗಿದೆ. ಆ ಮೂಲಕ ಉತ್ತರಾಖಂಡ್ನ ರೈತರ ಉತ್ಪನ್ನಗಳಿಗೆ ವಿದೇಶದಲ್ಲಿ ಮಾರುಕಟ್ಟೆ ದೊರೆತಂತಾಗಿದೆ.
ಹರಿದ್ವಾರದ ರೈತರಿಂದ ಪಡೆದುಕೊಂಡ ಕರಿಬೇವು, ಬೆಂಡೆಕಾಯಿ, ಅಂಜೂರ, ಹಾಗಲಕಾಯಿ ಸೇರಿದಂತೆ ಇನ್ನೂ ಹಲವಾರು ತರಕಾರಿ ಉತ್ಪನ್ನಗಳನ್ನು ನಿನ್ನೆ ಯುಎಇಗೆ ರಫ್ತು ಮಾಡಲಾಗಿದೆ. 2021 ರ ಮೇ ತಿಂಗಳಲ್ಲಿ ಉತ್ತರಾಖಂಡ್ನಲ್ಲಿ ಬೆಳೆದ ರಾಗಿಯನ್ನು ಡೆನ್ಮಾರ್ಕ್ಗೆ ರಫ್ತು ಮಾಡಲಾಗಿತ್ತು. ಇದೀಗ ಹಾಗಲಕಾಯಿ, ಕರಿಬೇವು ಸೇರಿದಂತೆ ಇನ್ನಿತರ ತರಕಾರಿ ವಸ್ತುಗಳನ್ನು ಯುಎಇಗೆ ರಫ್ತು ಮಾಡುವ ಮೂಲಕ ರೈತರಿಗೆ ನೆರವು ಒದಗಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.