ಗದಗ: ನಗರದ ಎರಡು ವರ್ಷದ ಪುಟಾಣಿ ಪ್ರತಿಭೆ ಲೋಹಿತಾ ಕುಷಗಿ, ತನ್ನ ಅಸಾಮಾನ್ಯ ನೆನಪಿನ ಶಕ್ತಿಯ ಕಾರಣಕ್ಕೆ ‘ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್’ ನಲ್ಲಿ ಹೆಸರು ಅಚ್ಚೊತ್ತಿಸಿಕೊಂಡಿದ್ದಾರೆ.
ಗದಗದ ಡಾ. ವೈಶಾಖ್ – ಹಿಮಲಾ ಕುಷಗಿ ಅವರ ಪುತ್ರಿ ಎರಡು ವರ್ಷದ ಪುಟಾಣಿ ದೇಶದ ಎಲ್ಲ ರಾಜ್ಯಗಳ ರಾಜಧಾನಿಗಳ ಹೆಸರು, ದೇಹದ ಅಂಗಗಳು, ನೊಬೆಲ್ ಪಾರಿತೋಷಕ ಪಡೆದವರು, ವಿಜ್ಞಾನಿಗಳು ಹೀಗೆ ಹಲವು ವಿಷಯಗಳನ್ನು ಕ್ಷಣಾರ್ಧದಲ್ಲಿ ಹೇಳುವ ಮೂಲಕ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದ್ದಾರೆ. ಅವರಿಗೆ ಪ್ರಶಸ್ತಿ ಪತ್ರ, ಪಾರಿತೋಷಕಗಳನ್ನು ನೀಡಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಗೌರವಿಸಿದೆ.
ಈ ಪುಟಾಣಿ ಬಿಡಿಯಾದ ಭಾರತದ ಚಿತ್ರದ ಭಾಗಗಳು, ಕರ್ನಾಟಕದ ಭಾಗಗಳನ್ನು ಸರಿಯಾಗಿ ಜೋಡಿಸುವಲ್ಲಿಯೂ ನಿಪುಣೆ. ಇವರ ಈ ಎಲ್ಲಾ ಚಟುವಟಿಕೆಗಳನ್ನು ವಿಡಿಯೋ ಮಾಡಿ ಇವರ ಪೋಷಕರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ಗೆ ಕಳುಹಿಸಿದ್ದು, ಅವರ ಸಾಧನೆಯನ್ನು ಗುರುತಿಸಿ, ಈ ಪುರಸ್ಕಾರ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.