News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೆಡಿಕಲ್ ಆಕ್ಸಿಜನ್ ಸೋರಿಕೆ ತಡೆಯುವ ಸಾಧನ ಅಭಿವೃದ್ಧಿ ಮಾಡಿದ ಐಐಟಿ ರೋಪರ್ ಸಂಶೋಧಕ

ಚಂಡೀಗಢ: ಐಐಟಿ ರೋಪರ್‌ನ ಸಂಶೋಧಕರೊಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಆಮ್ಲಜನಕ ವ್ಯರ್ಥ‌ವಾಗುವುದನ್ನು ತಡೆಯುವ ನಿಟ್ಟಿನಲ್ಲಿ, ಮಿತ ಬಳಕೆಗೆ ಪೂರಕವಾಗಿ‌ರುವ ಸಾಧನವೊಂದನ್ನು ಅಭಿವೃದ್ಧಿ ಮಾಡಿದ್ದಾರೆ.

ಇದು ರೋಗಿಯ ಉಸಿರಾಟ, ಪ್ರಯಾಣದ ಸಂದರ್ಭದಲ್ಲಿ ಅಗತ್ಯ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆ ಮಾಡುತ್ತದೆ. ಆ ಸಂದರ್ಭದಲ್ಲಿ ಆಮ್ಲಜನಕ ವ್ಯರ್ಥವಾಗುವುದನ್ನು ತಡೆದು, ಉಳಿತಾಯ ಮಾಡಲಿದೆ. ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ವೈದ್ಯಕೀಯ ಆಮ್ಲಜನಕ ಬೇಡಿಕೆ ಹೆಚ್ಚಿದ್ದು, ಅನಗತ್ಯ ವ್ಯರ್ಥ‌ವಾಗುವುದನ್ನು ತಡೆಯಲು ಈ ಸಾಧನ ಸಹಾಯ ಮಾಡುತ್ತದೆ ಎಂದು ಐಐಟಿ ತಿಳಿಸಿದೆ.

ಇದನ್ನು ಅಮೆಕ್ಸ್ ಎಂದು ಹೆಸರಿಸಲಾಗಿದ್ದು, ಇದು ಆಕ್ಸಿಜನ್ ಸಿಲಿಂಡರ್‌ಗಳಿಗಾಗಿ ಅಭಿವೃದ್ಧಿ ಮಾಡಿದ ವಿಶೇಷ ವ್ಯವಸ್ಥೆ‌ಯಾಗಿದೆ. ಇದು ರೋಗಿಯ ಉಸಿರಾಡುವಿಕೆ ಮತ್ತು ಆಮ್ಲಜನಕ ಹರಿವನ್ನು ಸಮತೋಲನದಲ್ಲಿ ಇಡುತ್ತದೆ. ಸಿಲಿಂಡರ್‌ನಲ್ಲಿ ಆಮ್ಲಜನಕ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ‌ಯೂ ಪೂರಕವಾಗಿದೆ. ಇದು ಬ್ಯಾಟರಿ, ವಿದ್ಯುತ್ ಎರಡರಲ್ಲೂ ಕಾರ್ಯನಿರ್ವಹಿಸಬಲ್ಲದು ಎಂದು ಐಐಟಿ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top