ನವದೆಹಲಿ: ಸಿಬಿಎಸ್ಇ (ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ) ಯು 2021-22 ನೇ ಸಾಲಿನ 10 ಮತ್ತು 12 ನೇ ತರಗತಿಯ ವಿಶೇಷ ಮೌಲ್ಯಮಾಪನ ವ್ಯವಸ್ಥೆಯನ್ನು ಪ್ರಕಟಿಸಿದೆ.
ಕೊರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಈ ನಿರ್ಣಯವನ್ನು ಸಿಬಿಎಸ್ಇ ಕೈಗೊಂಡಿದೆ. ಎರಡೂ ತರಗತಿಗಳನ್ನು ವರ್ಷಕ್ಕೆ ಎರಡು ಅವಧಿಗಳಂತೆ ವಿಭಾಗಿಸಲಾಗಿದೆ. ಎರಡು ಅವಧಿಯಲ್ಲಿ ಒಂದೇ ತರಗತಿಗೆ ಮೌಲ್ಯಮಾಪನ ನಡೆಯಲಿದೆ ಎಂದು ಅದು ಹೇಳಿದೆ. ಹಾಗೆಯೇ, 2021 – 22 ನೇ ಸಾಲಿನ ಪಠ್ಯಕ್ರಮದಲ್ಲಿಯೂ ಬದಲಾವಣೆ ಮಾಡಲಾಗುತ್ತದೆ. ಜೊತೆಗೆ ಆಂತರಿಕ ಮೌಲ್ಯಮಾಪನಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ ಎಂದು ಹೇಳಿದೆ.
ಕೊರೋನಾ ಹಿನ್ನೆಲೆಯಲ್ಲಿ 2020 – 21 ನೇ ಸಾಲಿನ ಪರೀಕ್ಷೆಯನ್ನು ಸಿಬಿಎಸ್ಇ ರದ್ದು ಮಾಡಿತ್ತು. ಈ ಬಾರಿಯ 12 ನೇ ತರಗತಿಯ ಫಲಿತಾಂಶವನ್ನು ಜುಲೈ 31 ರೊಳಗಾಗಿ ಪ್ರಕಟಿಸಲಿದೆ. ಈ ನಡುವೆ 2021 – 22 ನೇ ಶೈಕ್ಷಣಿಕ ವರ್ಷದ ರೂಪುರೇಷೆಯನ್ನು ಸಿಬಿಎಸ್ಇ ಅಂತಿಮಗೊಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.