ನವದೆಹಲಿ: ದೇಶದಲ್ಲಿ ಡ್ರೋನ್ ದಾಳಿಗಳಂತಹ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಐಎಎಫ್ ಕ್ರಮ ಕೈಗೊಂಡಿದೆ.
ಡ್ರೋನ್ ದಾಳಿಗೆ ಸಂಬಂಧಿಸಿದಂತೆ ಹತ್ತು ಪ್ರತಿರೋಧಕಗಳನ್ನು ಖರೀದಿ ಮಾಡುವುದಕ್ಕಾಗಿ ಐಎಎಫ್ ಬಿಡ್ಗಳನ್ನು ಆಹ್ವಾನಿಸಿದೆ. ಡ್ರೋನ್ ದಾಳಿಯನ್ನು ಸಮರ್ಥವಾಗಿ ಎದುರಿಸಬಲ್ಲ ಹತ್ತು ಮಾನವ ರಹಿತ ವೈಮಾನಿಕ ವ್ಯವಸ್ಥೆಗಳನ್ನು ಖರೀದಿ ಮಾಡಲು ಏರ್ಫೋರ್ಸ್ ಸ್ಟೇಶನ್ ಸಿದ್ಧತೆ ನಡೆಸಿದೆ.
ಇದಕ್ಕೆ ಪೂರಕ ಎಂಬಂತೆ ಐಎಎಫ್ ಭಾರತೀಯ ಸಂಸ್ಥೆಗಳಿಂದ ಪ್ರತಿಕ್ರಿಯೆಗಳನ್ನು ಕೇಳಿದೆ. ಈ ಪ್ರತಿರೋಧಕಕ್ಕೆ ಸಿಯುಎಎಸ್ ಎಂದು ಹೇಳಲಾಗುತ್ತದೆ. ಇದನ್ನು ಎದುರಾಳಿ ಡ್ರೋನ್ ಅನ್ನು ಹೊಡೆದುರುಳಿಸುವ ನಿಟ್ಟಿನಲ್ಲಿ ಬಳಕೆ ಮಾಡಲಾಗುತ್ತದೆ. ಜೂ. 27 ರಂದು ಜಮ್ಮು ವಾಯುನೆಲೆ ಮೇಲೆ ನಡೆದ ಮೊದಲ ಡ್ರೋನ್ ಭಯೋತ್ಪಾದಕ ದಾಳಿ ಮತ್ತು ಆ ಬಳಿಕ ಅನೇಕ ಡ್ರೋನ್ಗಳ ಅಕ್ರಮ ಹಾರಾಟ ಕಂಡುಬಂದ ಹಿನ್ನೆಲೆಯಲ್ಲಿ ಐಎಎಫ್ ಇಂತಹ ನಿರ್ಣಯ ಕೈಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.