ನವದೆಹಲಿ: ಕೊರೋನಾ ಎರಡನೇ ಅಲೆಯ ಲಾಕ್ಡೌನ್ ಕಾರಣಕ್ಕೆ ಪ್ರಯಾಣಿಕರಿಲ್ಲದೆ ಭಾರತೀಯ ರೈಲ್ವೆ ಆದಾಯ ನಷ್ಟ ಅನುಭವಿಸಿದ್ದರೂ, ಸ್ಕ್ರ್ಯಾಪ್ ಮಾರಾಟದಿಂದ ದಾಖಲೆಯ ಪ್ರಮಾಣದ ಆದಾಯವನ್ನು ತನ್ನದಾಗಿಸಿಕೊಂಡಿದೆ.
ಪ್ರಸಕ್ತ 2020-21 ರ ಅವಧಿಯಲ್ಲಿ ಸ್ಕ್ರ್ಯಾಪ್ ಮಾರಾಟದಿಂದ ಬರೋಬ್ಬರಿ 4575 ಕೋಟಿ ರೂ. ಗಳನ್ನು ರೈಲ್ವೆ ತನ್ನ ಬೊಕ್ಕಸಕ್ಕೆ ಇಳಿಸಿಕೊಂಡಿದೆ. ಕಳೆದ ಹತ್ತು ವರ್ಷಗಳ ಹಿಂದೆ ಅಂದರೆ 2010-11 ರ ಸಂದರ್ಭದಲ್ಲಿ ಸ್ಕ್ರ್ಯಾಪ್ ಮಾರಾಟದಿಂದ ರೈಲ್ವೆ ಇಲಾಖೆ 4409 ಕೋಟಿ ರೂ. ಆದಾಯ ಗಳಿಸಿತ್ತು. ಆದರೆ ಈ ಬಾರಿ 4575 ಕೋಟಿ ರೂ. ಆದಾಯ ಗಳಿಸಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಮಧ್ಯಪ್ರದೇಶದ ವ್ಯಕ್ತಿ ಚಂದ್ರಶೇಖರ್ ಗೌರ್ ಎಂಬವರು ಆರ್ಟಿಐ ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಗೆ ಉತ್ತರಿಸಿರುವ ರೈಲ್ವೆ ಅಧಿಕಾರಿಗಳು ಈ ಮಹತ್ವದ ವಿಚಾರವನ್ನು ತಿಳಿಸಿದ್ದಾರೆ. 2020-21 ರ ಅವಧಿಯಲ್ಲಿ ಸ್ಕ್ರ್ಯಾಪ್ ಮಾರಾಟದಿಂದ 5% ಗಳಷ್ಟು ಆದಾಯ ಪ್ರಮಾಣ ಹೆಚ್ಚಿರುವುದಾಗಿಯೂ ಅಧಿಕಾರಿಗಳು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.