ಹುಬ್ಬಳ್ಳಿ: ಇದೇ ಮೊದಲ ಬಾರಿ ಹೋಟಗಿಯಿಂದ ವಿಜಯಪುರ ಮಾರ್ಗವಾಗಿ ಡಿಸೇಲ್ ರಹಿತ ವಿದ್ಯುತ್ಯಂತ್ರದ ಗೂಡ್ಸ್ ರೈಲು ಸಾಗಾಟ ಆರಂಭವಾಗಿದೆ.
ಈ ರೈಲು ಸುಮಾರು 21 ಬೋಗಿಗಳನ್ನು ಹೊಂದಿದ್ದು, 1660 ಟನ್ ಸಿಮೆಂಟ್ ಹೊತ್ತು 94 ಕಿಲೋಮೀಟರ್ ಪ್ರಯಾಣವನ್ನು ಯಶಸ್ವಿಯಾಗಿ ಮುಗಿಸಿದೆ. ಮಾಲಿನ್ಯ ಕಡಿಮೆಗೊಳಿಸುವ ನಿಟ್ಟಿನಲ್ಲಿಯೂ ಈ ರೈಲು ಸಂಚಾರ ಹೆಚ್ಚು ಪರಿಣಾಮ ಬೀರಲಿದೆ.
ಇಂಧನ ದಕ್ಷತೆ, ತ್ವರಿತವಾದ ಕಾರ್ಯಾಚರಣೆ, ಸುಸ್ಥಿರತೆಯೂ ಇದರಿಂದ ಸಾಧ್ಯವಾಗಲಿದೆ. ಈ ರೈಲಿನ ಬಳಕೆ ಯು ಮಾಲಿನ್ಯ ಹೊರಸೂಸುವಿಕೆ ಪ್ರಮಾಣವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿಯೂ ಹೆಚ್ಚು ಮಹತ್ವ ಪಡೆಯಲಿದೆ. ಪ್ರಧಾನಿ ಮೋದಿ ಅವರ ಆಶಯದಂತೆ ರೈಲ್ವೆಯನ್ನು 100% ಗಳಷ್ಟು ವಿದ್ಯುದೀಕರಣ ಮಾಡುವ ಮೂಲಕ ಪರಿಸರ ಸ್ನೇಹಿ ಸಾರಿಗೆಯಾಗಿಸುವಲ್ಲಿಯೂ ಹೆಚ್ಚು ಪೂರಕವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.