ನವದೆಹಲಿ: ಸೈಬರ್ ಬೆದರಿಕೆಗಳನ್ನು ಎದುರಿಸಲು ಕ್ರಿಯಾಶೀಲ ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ಮಿಲಿಟರಿ ವ್ಯವಹಾರಗಳ ಇಲಾಖೆ (ಡಿಎಂಎ)ಯು ಭಾರತೀಯ ಸಶಸ್ತ್ರ ಪಡೆಗಳ 100 ಸಿಬ್ಬಂದಿಯನ್ನು ಅಮೆರಿಕಕ್ಕೆ ಕಳುಹಿಸಲಿದ್ದು, ಭವಿಷ್ಯದ ಯುದ್ಧಕ್ಕಾಗಿ ಇತ್ತೀಚಿನ ಸೈಬರ್ ಸುರಕ್ಷತೆ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (ಎಐ)ಯೊಂದಿಗೆ ಅವರನ್ನು ಸಜ್ಜುಗೊಳಿಸುವ ಇದರ ಹಿಂದಿನ ಉದ್ದೇಶವಾಗಿದೆ.
2016 ರ ಯುಎಸ್ ಸೈಬರ್ ಫ್ರೇಮ್ವರ್ಕ್ ಮತ್ತು ರಕ್ಷಣಾ ಸಹಕಾರ ಒಪ್ಪಂದದ ಪ್ರಕಾರ, ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಲ್ಲಿ ಭವಿಷ್ಯದ ರಕ್ಷಣಾ ಮತ್ತು ಯುದ್ಧದಲ್ಲಿ ಸೈಬರ್ ಯುದ್ಧ ಮತ್ತು ಎಐ ಪಾತ್ರವನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು 100 ಭಾರತೀಯ ಮಿಲಿಟರಿ ಸಿಬ್ಬಂದಿಗೆ ಮೊದಲ ಅನುಭವದೊಂದಿಗೆ ತರಬೇತಿ ನೀಡಲಾಗುತ್ತದೆ.
ಈ ನಡುವೆ, ಮಧ್ಯಪ್ರದೇಶದ ಒಳನಾಡಿನಲ್ಲಿ ಸಮರ್ಥ ಸೈಬರ್ ಕಮಾಂಡ್ ಅನ್ನು ಸ್ಥಾಪನೆ ಮಾಡಲು ಸರ್ಕಾರವು ಅನುಮೋದನೆ ನೀಡಿದೆದೆ.
ಪ್ರಸ್ತುತ, ಭಾರತೀಯ ಸಶಸ್ತ್ರ ಪಡೆಗಳು ಸಮಗ್ರ ಪ್ರಧಾನ ಕಛೇರಿಯಡಿಯಲ್ಲಿ ತ್ರಿ-ಸೇವಾ ರಕ್ಷಣಾ ಸೈಬರ್ ಏಜೆನ್ಸಿಯನ್ನು ಹೊಂದಿವೆ. ಇದಲ್ಲದೆ, ಲಡಾಖ್ ಕಾರ್ಪ್ಸ್ ಜೊತೆಗೆ ನಾರ್ದರ್ನ್ ಕಮಾಂಡ್, ಸಿಲಿಗುರಿ ಕಾರ್ಪ್ಸ್, ಮತ್ತು ತೇಜ್ಪುರ್ ಕಾರ್ಪ್ಸ್ನಂತಹ ಫಾರ್ವರ್ಡ್ ರಚನೆಗಳಲ್ಲಿ ವಿರೋಧಿಗಳೊಂದಿಗೆ ಯಾವುದೇ ಮಾಲ್ವೇರ್ ಇಲ್ಲದೆ ಮಿಲಿಟರಿ ಸಂವಹನ ಸುರಕ್ಷಿತವೆಂದು ಕಮಾಂಡ್ ಚಾರ್ಟರ್ ಖಚಿತಪಡಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.