ಲಕ್ನೋ: ಉತ್ತರ ಪ್ರದೇಶದಲ್ಲಿ ಸಂಭಾವ್ಯ ಕೊರೋನಾ ಮೂರನೇ ಅಲೆ ತಡೆಗೆ ಮುಂದಾಗಿರುವ ಸಿಎಂ ಆದಿತ್ಯನಾಥ್ ಸರ್ಕಾರ ಜುಲೈ 31 ರ ವರೆಗೆ ರಾಜ್ಯವ್ಯಾಪಿ ಸಾಂಕ್ರಾಮಿಕ ತಡೆ ಅಭಿಯಾನ ಆರಂಭಿಸಿದೆ.
ಈ ಅಭಿಯಾನದ ಮೂಲಕ ಕೊರೋನಾ ಸೋಂಕಿನ ಅರಿವು, ಮುಂಜಾಗ್ರತೆ, ಸೋಂಕು ನಿಯಂತ್ರಣ ಕ್ರಮಗಳ ಬಗ್ಗೆ ಸರ್ಕಾರ ಶ್ರಮಿಸಲಿದೆ. ಹಾಗೆಯೇ ಜುಲೈ 12 – 25 ರ ವರೆಗೆ ಮೆನಿಂಜೈಟಿಸ್ ನಿಯಂತ್ರಣ ಸಂಬಂಧ ದಸ್ತಕ್ ಅಭಿಯಾನ ಸಹ ನಡೆಯಲಿದ್ದು, ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರು ಈ ಅಭಿಯಾನವನ್ನು ನಡೆಸಲಿದ್ದಾರೆ. ಮನೆ ಮನೆಗೆ ತೆರಳಿ ಜನಜಾಗೃತಿ ಮೂಡಿಸುವ ಅಭಿಯಾನ ಇದಾಗಿದೆ ಎಂದು ಮೂಲಗಳು ತಿಳಿಸಿವೆ.
ಹಾಗೆಯೇ ಕೊರೋನಾ ಸೇರಿದಂತೆ ಇನ್ನಿತರ ಕಾಯಿಲೆಗಳ ಚಿಕಿತ್ಸೆಗಾಗಿ 50 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಮತ್ತು 71 ಲಕ್ಷ ವಯಸ್ಕರಿಗೆ ಔಷಧಿ ಕಿಟ್ಗಳನ್ನು ಉಚಿತವಾಗಿ ನೀಡಲು ಯೋಗಿ ಸರ್ಕಾರ ತೀರ್ಮಾನಿಸಿದೆ. ಈ ಒಂದು ತಿಂಗಳ ಅಭಿಯಾನಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ, ಪಂಚಾಯತ್ ರಾಜ್, ಗ್ರಾಮ ಅಭಿವೃದ್ಧಿ, ಪಶುಸಂಗೋಪನೆ, ಶಿಕ್ಷಣ, ಕೃಷಿ, ವಿಕಲಚೇತನರ ಸಬಲೀಕರಣ, ನೀರಾವರಿ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳು, ವೈದ್ಯಕೀಯ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳು ವಿಶೇಷ ಕ್ರಿಯಾ ಯೋಜನೆಯನ್ನು ತಯಾರಿಸಲಿವೆ.
ಹಾಗೆಯೇ ಆರೋಗ್ಯ ಕೇಂದ್ರಗಳ ಸಂಖ್ಯೆ ಹೆಚ್ಚಿಸುವುದು, ಪ್ರೌಢ ಶಿಕ್ಷಣ ಇಲಾಖೆಯ ಮೂಲಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನೊಳಗೊಂಡ ವಾಟ್ಸಾಪ್ ಗುಂಪುಗಳ ಮೂಲಕ ಈ ಸಂಬಂಧ ಚಟುವಟಿಕೆಗಳನ್ನು ನಡೆಸುವುದು, ಜಾಗೃತಿ ಮೂಡಿಸಲು ಪ್ರಬಂಧ, ಚಿತ್ರಕಲೆ, ಘೋಷಣೆ, ರಸಪ್ರಶ್ನೆ ಮೊದಲಾದ ಸ್ಪರ್ಧೆಗಳನ್ನು ಆಯೋಜಿಸುವುದಾಗಿಯೂ ಮೂಲಗಳು ಹೇಳಿವೆ.
ಹಾಗೆಯೇ ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ಬಗೆಗೂ ಸೂಕ್ಷ್ಮವಾಗಿ ಗಮನ ವಹಿಸುವುದಾಗಿ ಸರ್ಕಾರದ ಮೂಲಗಳು ಹೇಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.