ನವದೆಹಲಿ: ಕೊರೋನಾ ಲಸಿಕೆ ಪೂರೈಕೆಗೆ ಸಂಬಂಧಿಸಿದಂತೆ ಕೆಲವು ರಾಜ್ಯಗಳ ನಾಯಕರು ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದ್ದು, ಇದಕ್ಕೆ ಕೇಂದ್ರ ಸಚಿವ ಡಾ ಹರ್ಷವರ್ಧನ್ ಅವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಆಯಾಯ ರಾಜ್ಯಗಳಲ್ಲಿ ಕೊರೋನಾ ಲಸಿಕೆಗೆ ಸಂಬಂಧಿಸಿದಂತೆ ಏನೇ ಸಮಸ್ಯೆಗಳಿದ್ದರೂ ಅದನ್ನು ಅವರವರೇ ಪರಿಹರಿಸಿಕೊಳ್ಳಬೇಕು. ಅವೆಲ್ಲಕ್ಕೂ ಆಯಾ ರಾಜ್ಯಗಳೇ ಹೊಣೆಯಾಗಿರುತ್ತವೆ. ಲಸಿಕೆ ವಿತರಣೆಯನ್ನು ಸಹ ಸರಿಯಾಗಿ ಯೋಜಿಸುವಂತೆ ಅವರು ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಯಾವುದೇ ರಾಜ್ಯದಲ್ಲಿ ಲಸಿಕೆ ಪೂರೈಕೆ ಸಮಸ್ಯೆ ಇದ್ದರೆ, ಅದು ಆ ರಾಜ್ಯಗಳದ್ದೇ ಲೋಪವಾಗಿದೆ. ರಾಜ್ಯಗಳು ಲಸಿಕಾ ಕಾರ್ಯವನ್ನು ಉತ್ತಮವಾಗಿ ಯೋಜಿಸುವ ಅಗತ್ಯ ಇದೆ. ರಾಜ್ಯದಲ್ಲಿ ಲಸಿಕಾ ಯೋಜನೆ ಮತ್ತು ವಿತರಣೆಯ ಸಂಪೂರ್ಣ ಜವಾಬ್ದಾರಿ ಆಯಾಯ ರಾಜ್ಯಗಳದ್ದೇ ಎಂದು ತಿಳಿಸಿದ್ದಾರೆ. ಕೊರೋನಾ ಸಾಂಕ್ರಾಮಿಕದ ನಡುವೆ ಇಂತಹ ರಾಜಕೀಯ ಪ್ರವೃತ್ತಿಯಿಂದ ಹೊರಬರುವಂತೆ ನಾಯಕರಲ್ಲಿ ಕೋರುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಈ ವಿಚಾರಗಳ ಬಗ್ಗೆ ತಿಳಿದಿದ್ದರೃ ನಾಯಕರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ದುರಾದೃಷ್ಟ. ಅವರಿಗೆ ಅದರ ಬಗ್ಗೆ ಅರಿವಿಲ್ಲದಲ್ಲಿ, ಆಡಳಿತದತ್ತ ಗಮನ ನೀಡಬೇಕು. ಭಯಭೀತಿ ಸೃಷ್ಟಿಸುವ ಬದಲು ಯೋಜನೆಯಲ್ಲಿ ಹೆಚ್ಚು ಶ್ರಮ ವಹಿಸುವಂತೆ ನಾಯಕರಲ್ಲಿ ವಿನಂತಿಸುವುದಾಗಿ ಹೇಳಿದ್ದಾರೆ.
👉If there are issues in states, it shows that they need to better plan their #vaccination drives. Intra-state planning & logistics are the responsibility of the states
👉I request these leaders to desist from their shameless urge to play politics even in the midst of a pandemic
— Dr Harsh Vardhan (@drharshvardhan) July 1, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.