ನವದೆಹಲಿ: ಜಮ್ಮುವಿನ ವಾಯುಸೇನೆ ನೆಲೆಯಲ್ಲಿ ಭಾನುವಾರ ಸಂಜೆ ನಡೆದ ಅವಳಿ ಸ್ಪೋಟಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವ ಸಲುವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತಂಡವು ನಿನ್ನೆಯೇ ಜಮ್ಮು ವಾಯುಪಡೆ ನಿಲ್ದಾಣವನ್ನು ತಲುಪಿದೆ.
ಕಾರ್ಯಾಚರಣೆಯ ಕಾರಣಗಳಿಂದ ರದ್ದುಗೊಂಡ ಎರಡು ವಿಮಾನಗಳನ್ನು ಹೊರತುಪಡಿಸಿ, ಇಂದು ಜಮ್ಮು ವಿಮಾನ ನಿಲ್ದಾಣದಿಂದ ಎಲ್ಲಾ ವಿಮಾನ ಕಾರ್ಯಾಚರಣೆಗಳು ಸಾಮಾನ್ಯವಾಗಿ ನಡೆದಿವೆ ಎಂದು ಮೂಲಗಳು ತಿಳಿಸಿವೆ.
ವಾಯುಪಡೆ ನಿಲ್ದಾಣದಲ್ಲಿ ಸಂಭವಿಸಿದ ಎರಡು ಸ್ಫೋಟಗಳ ಹಿನ್ನೆಲೆಯಲ್ಲಿ ವಾಯುಪಡೆಯ ನಿಲ್ದಾಣದಲ್ಲಿನ ಕಾಂಕ್ರೀಟ್ ರಚನೆಗಳಿಗೆ ಸ್ವಲ್ಪ ಹಾನಿಯಾಗಿದ್ದು, ಈ ಸ್ಥಳವನ್ನು ಎನ್ಐಎ ಪರಿಶೀಲಿಸಿದೆ.
ಸ್ಫೋಟಗಳ ಪರಿಣಾಮವಾಗಿ, ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸ್ಫೋಟಗಳು ಎಷ್ಟು ಶಕ್ತಿಯುತವಾಗಿತ್ತು ಎಂದರೆ ಸುಮಾರು ಒಂದು ಕಿಲೋಮೀಟರ್ ದೂರದವರೆಗೆ ಅದರ ಸದ್ದು ಕೇಳಿಸಿತ್ತು ಎಂದು ಮೂಲಗಳು ತಿಳಿಸಿವೆ.
ವಾಯುಪಡೆಯ ನಿಲ್ದಾಣದಲ್ಲಿ ಕಡಿಮೆ ತೀವ್ರತೆಯ ಬಾಂಬ್ಗಳನ್ನು ಕೆಳಕ್ಕೆ ಬೀಳಿಸಲು ಡ್ರೋನ್ಗಳನ್ನು ಬಳಸಲಾಗಿದೆ ಎಂದು ಹೇಳಲಾಗಿದೆ.
ಭಾರತೀಯ ವಾಯುಪಡೆಯ ನೆಲೆಯಲ್ಲಿ ನಡೆದ ಬಾಂಬ್ ಸ್ಫೋಟದ ಗುರಿ ವಾಯು ಸಂಚಾರ ನಿಯಂತ್ರಣ (ಎಟಿಸಿ) ಕಟ್ಟಡ ಮತ್ತು ಎಂಐ 17 ಹೆಲಿಕಾಪ್ಟರ್ಗಳು ಎಂದು ಗುಪ್ತಚರ ಸಂಸ್ಥೆಗಳ ಮೂಲಗಳು ಹೇಳಿವೆ, ಆದರೆ ಎರಡೂ ಡ್ರೋನ್ಗಳು ತಮ್ಮ ಗುರಿಗಳನ್ನು ತಪ್ಪಿಸಿಕೊಂಡವು ಎಂದು ಹೇಳಲಾಗಿದೆ.
ಎರಡು ಡ್ರೋನ್ಗಳಲ್ಲಿ ಒಂದು 5 ಕೆಜಿ ಟಿಎನ್ಟಿ ಬಾಂಬ್ ಹೊಂದಿದ್ದವು ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.