ನವದೆಹಲಿ: ಪ್ಯಾನ್ಕಾರ್ಡ್ ಅನ್ನು ಆಧಾರ್ನೊಂದಿಗೆ ಜೋಡಿಸುವ ಗಡುವನ್ನು ಸರ್ಕಾರ ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಿದೆ. ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಆದಾಯ ತೆರಿಗೆ ರಿಟರ್ನ್ ಮತ್ತು ಪ್ಯಾನ್ಗಾಗಿನ ಅರ್ಜಿಯಲ್ಲಿ ಆಧಾರ್ ಸಂಖ್ಯೆಯನ್ನು ಉಲ್ಲೇಖಿಸುವುದನ್ನು ಹಣಕಾಸು ಸಚಿವಾಲಯವನ್ನು ಕಡ್ಡಾಯಗೊಳಿಸಿದೆ.
ವಿವಾದ್ ಸೆ ವಿಶ್ವಾಸ್ ಅಡಿ ಬಡ್ಡಿ ಇಲ್ಲದೆ ಪಾವತಿಯನ್ನು ಆಗಸ್ಟ್ 31 ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಹಣಕಾಸು ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಕೋವಿಡ್-19 ಚಿಕಿತ್ಸೆಯ ಖರ್ಚಿಗೆ ಮತ್ತು ಕೋವಿಡ್-19 ಕಾರಣದಿಂದಾಗಿ ಸಾವಿಗೀಡಾದವರ ಎಕ್ಸ್-ಗ್ರೇಟಿಯಾ ಮೇಲೆ ತೆರಿಗೆ ವಿನಾಯಿತಿಯನ್ನು ಅವರು ಘೋಷಿಸಿದ್ದಾರೆ.
ಕೋವಿಡ್ -19 ಚಿಕಿತ್ಸೆಗಾಗಿ ಮಾಡಿದ ಖರ್ಚುಗಳನ್ನು ಪೂರೈಸಲು ಅನೇಕ ತೆರಿಗೆದಾರರು ತಮ್ಮ ಉದ್ಯೋಗದಾತರು ಮತ್ತು ಹಿತೈಷಿಗಳಿಂದ ಆರ್ಥಿಕ ಸಹಾಯವನ್ನು ಪಡೆದಿದ್ದಾರೆ ಎಂದು ಠಾಕೂರ್ ಹೇಳಿದ್ದಾರೆ. ಹೀಗಾಗಿ ಅವರ ಖಾತೆಯಲ್ಲಿ ಯಾವುದೇ ಆದಾಯ ತೆರಿಗೆ ಹೊಣೆಗಾರಿಕೆ ಉಂಟಾಗದಂತೆ ನೋಡಿಕೊಳ್ಳಲು, ಉದ್ಯೋಗದಾತರಿಂದ ಅಥವಾ ಕೋವಿಡ್ -19 ಚಿಕಿತ್ಸೆಗಾಗಿ ಯಾವುದೇ ವ್ಯಕ್ತಿಯಿಂದ ವೈದ್ಯಕೀಯ ಚಿಕಿತ್ಸೆಗಾಗಿ ತೆರಿಗೆದಾರರು ಪಡೆದ ಮೊತ್ತಕ್ಕೆ ಆದಾಯ ತೆರಿಗೆ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು. ಹಣಕಾಸು ವರ್ಷ 2019-20 ಮತ್ತು ನಂತರದ ವರ್ಷಗಳಿಗೆ ಇದು ಅನ್ವಯವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.