ಕೊಚ್ಚಿ: ಭಾರತದ ಮೊದಲ ‘ಮೇಡ್-ಇನ್-ಇಂಡಿಯಾ’ ವಿಮಾನವಾಹಕ ನೌಕೆ – ಐಎನ್ಎಸ್ ವಿಕ್ರಾಂತ್ ಮುಂದಿನ ವರ್ಷ ಕಾರ್ಯಾರಂಭ ಮಾಡಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕೊಚ್ಚಿಯ ದಕ್ಷಿಣ ನೌಕಾಪಡೆಯ ಕಮಾಂಡ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ತಿಳಿಸಿದ್ದಾರೆ.
ಸ್ಥಳೀಯ ವಿಮಾನವಾಹಕ ನೌಕೆ ಅಥವಾ ಐಎಸಿ ನಿರ್ಮಾಣದಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸಿದ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ ರಾಜನಾಥ್ ಸಿಂಗ್, ” ನೌಕೆಯ ದೇಶೀಯ ನಿರ್ಮಾಣ ಭಾರತದ ಹೆಮ್ಮೆ ಮತ್ತು ಆತ್ಮನಿರ್ಭರ ಭಾರತದ ಹೊಳೆಯುವ ಉದಾಹರಣೆ” ಎಂದು ಬಣ್ಣಿಸಿದ್ದಾರೆ.
“ಮುಂದಿನ ವರ್ಷ ಐಎಸಿಯನ್ನು ಸೇವೆ ನಿಯೋಜಿಸಲಾಗುತ್ತಿದೆ. ಭಾರತದ ಸ್ವಾತಂತ್ರ್ಯದ 75 ನೇ ವರ್ಷಕ್ಕೆ ಇದು ಸೂಕ್ತವಾದ ಗೌರವವಾಗಿದೆ” ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಕೇರಳದ ಕೊಚ್ಚಿಯ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ನಲ್ಲಿ ನಿರ್ಮಿಸಲಾಗುತ್ತಿರುವ ಐಎನ್ಎಸ್ ವಿಕ್ರಾಂತ್ (ಐಎಸಿ) ನೌಕೆಗೆ ಸಿಂಗ್ ಭೇಟಿ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.