ನವದೆಹಲಿ: ಭಾರತದ ಕೋವಿಡ್ -19 ವ್ಯಾಕ್ಸಿನೇಷನ್ ಪೋರ್ಟಲ್- CoWIN ಅನ್ನು ಅಳವಡಿಸಿಕೊಳ್ಳಲು 20 ರಾಷ್ಟ್ರಗಳು ಆಸಕ್ತಿಯನ್ನು ತೋರಿಸುತ್ತಿವೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಹೇಳಿದ್ದಾರೆ.
ಸುದ್ದಿ ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಕೋವಿನ್ ಪೋರ್ಟಲ್ ವಿರುದ್ಧ ರಾಹುಲ್ ಅವರ ಲಾಬಿ ದಾಳಿ ನಡೆಸುತ್ತಿರುವ ಈ ಸಂದರ್ಭದಲ್ಲಿ ವಿಶ್ವದಾದ್ಯಂತದ 20 ರಾಷ್ಟ್ರಗಳು ತಮ್ಮ ಕೋವಿಡ್-19 ಲಸಿಕೆ ಅಭಿಯಾನಗಳಿಗಾಗಿ ಈ ಪೋರ್ಟಲ್ ಅನ್ನು ಅಳವಡಿಸಿಕೊಳ್ಳಲು ಬಯಸಿವೆ ಎಂದು ಹೇಳಿದ್ದಾರೆ.
“ರಾಹುಲ್ ಗಾಂಧಿ ಮತ್ತು ಅವರ ವೃತ್ತಿಪರ ಲಾಬಿಗಳು ಸಾರ್ವತ್ರಿಕ ಕೋವಿಡ್ ವ್ಯಾಕ್ಸಿನೇಷನ್ ಅಪ್ಲಿಕೇಶನ್ ಕೋವಿನ್ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ದಾಳಿ ಮಾಡುತ್ತಲೇ ಇದ್ದರೂ, 20 ಕ್ಕೂ ಹೆಚ್ಚು ರಾಷ್ಟ್ರಗಳು ಈ ಪೋರ್ಟಲ್ ಅನ್ನು ಅಳವಡಿಸಲು ಬಯಸುತ್ತಿವೆ. ಭಾರತ ದ್ವೇಷಿಗಳಿಗೆ ಈಗ ತಮ್ಮ ವಿಷವನ್ನು ಯಾರು ತೆಗೆದುಕೊಳ್ಳುವವರಿಲ್ಲ ಎಂಬುದನ್ನು ಕಂಡು ಬೇಸರವಾಗಿರಬಹುದು” ಎಂದು ಹೇಳಿದ್ದಾರೆ.
ಅಮಿತ್ ಮಾಳವಿಯಾ ಉಲ್ಲೇಖಿಸಿರುವ ವರದಿಯ ಪ್ರಕಾರ, ಕೇಂದ್ರ ಆರೋಗ್ಯ ಸಚಿವಾಲಯ, ವಿದೇಶಾಂಗ ಸಚಿವಾಲಯ ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಕೋ-ವಿನ್ ಗ್ಲೋಬಲ್ ಕಾನ್ಫರೆನ್ಸ್ ಅನ್ನು ಜೂನ್ 30 ರಂದು ಆಯೋಜನೆ ಮಾಡುತ್ತಿದ್ದು, ಇದಕ್ಕೆ 20 ದೇಶಗಳ ಆರೋಗ್ಯ ಮತ್ತು ತಂತ್ರಜ್ಞಾನ ತಜ್ಞರನ್ನು ಆಹ್ವಾನಿಸಿದೆ.
ಯುಎಇ, ವಿಯೆಟ್ನಾಂ, ಪೆರು, ಮೆಕ್ಸಿಕೊ, ಇರಾಕ್ ಮತ್ತು ಇತರರು ತಮ್ಮ ಕೋವಿಡ್ -19 ವ್ಯಾಕ್ಸಿನೇಷನ್ ಡ್ರೈವ್ಗಳಿಗಾಗಿ ಭಾರತದ ಕೋವಿನ್ ಪೋರ್ಟಲ್ ಅನ್ನು ಅಳವಡಿಸಿಕೊಳ್ಳಲು ಆಸಕ್ತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.