ಗೌರಿಬಿದನೂರು: ನಗರದ ಶಂಬೂಕನಗರ ಎಂಬಲ್ಲಿ ಡ್ರೋನ್ ಮೂಲಕ ಔಷಧಗಳನ್ನು ಪೂರೈಕೆ ಮಾಡುವ ಪ್ರಪ್ರಥಮ ಪ್ರಯೋಗಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡ್ರೋನ್ ನಿರ್ವಹಣೆ ಮತ್ತು ಟಿಎಎಸ್ ಸಂಸ್ಥೆಯ ನಿರ್ದೇಶಕ ಗಿರೀಶ್ ರೆಡ್ಡಿ ಅವರು, ಡ್ರೋನ್ ಯಶಸ್ವಿಯಾಗಿ ಕಾರ್ಯಾರಂಭ ಮಾಡಿರುವುದು ಸಂತಸ ತಂದಿದೆ. ಡ್ರೋನ್ ಮೂಲಕ ಔಷಧಗಳನ್ನು ರವಾನಿಸುವ ದೇಶದ ಮೊಟ್ಟ ಮೊದಲ ಪ್ರಯತ್ನ ಇದಾಗಿದೆ ಎಂದು ತಿಳಿಸಿದ್ದಾರೆ.
ತಾಲೂಕಿನಲ್ಲಿ ಈ ಪ್ರಯೋಗವನ್ನು 30 -45 ದಿನಗಳ ವರೆಗೆ ನಡೆಸಲಾಗುವುದು. ಸರ್ಕಾರದ ಅಧಿಕೃತ ಅನುಮತಿಯ ಮೇರೆಗೆ ಈ ಪ್ರಾಯೋಗಿಕ ಪರೀಕ್ಷೆಗೆ ಚಾಲನೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.
ಈ ಪ್ರಾಯೋಗಿಕ ಪರೀಕ್ಷೆ ಟಿಎಎಸ್ ಸಂಸ್ಥೆ ಮತ್ತು ನಾರಾಯಣ ಆರೋಗ್ಯ ಸಂಸ್ಥೆಯ ಸಹಯೋಗದಲ್ಲಿ ನಡೆದಿದೆ. ಮೊದಲ ದಿನದಂದು ಈ ಡ್ರೋಣ್ ಅನ್ನು 5 ಬಾರಿ ಉಡಾವಣೆ ಮಾಡಲಾಗಿದ್ದು, 2.5 ಕಿಮೀ ದೂರ ಕ್ರಮಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.