ತುಮಕೂರು: ರಾಜ್ಯದ ನೈರುತ್ಯ ರೈಲ್ವೆಯು ತುಮಕೂರು- ಯಶವಂತಪುರ ನಡುವೆ ಮತ್ತೊಂದು ಡೆಮು ರೈಲು ಸಂಚಾರ ಆರಂಭಿಸಿದೆ.
ಈ ರೈಲು ಯಶವಂತಪುರದಿಂದ ಬೆಳಗ್ಗೆ 5.30 ಕ್ಕೆ, ತುಮಕೂರಿನಿಂದ ಬೆಳಗ್ಗೆ 8 ಗಂಟೆಗೆ, ಯಶವಂತಪುರದಿಂದ ಬೆಳಗ್ಗೆ 9.30 ಕ್ಕೆ, ತುಮಕೂರಿನಿಂದ ಸಂಜೆ 4.20 ಮತ್ತು ಯಶವಂತಪುರದಿಂದ ಸಂಜೆ 6 ಮತ್ತು ತುಮಕೂರಿನಿಂದ ರಾತ್ರಿ 7.40 ಕ್ಕೆ ಹೊರಡಲಿದೆ.
ಈ ರೈಲು ತುಮಕೂರು – ಯಶವಂತಪುರ ನಡುವಿನ ಎಲ್ಲಾ ನಿಲ್ದಾಣಗಳಲ್ಲಿಯೂ ನಿಲುಗಡೆಯಾಗಲಿದೆ. ಕೊರೋನಾ ಲಾಕ್ಡೌನ್ ಬಳಿಕ ಇದೀಗ ನಿಧಾನಗತಿಯಲ್ಲಿ ಎಲ್ಲಾ ಕೈಗಾರಿಕಾ ಚಟುವಟಿಕೆಗಳು ಮತ್ತೆ ಆರಂಭವಾಗುತ್ತಿದ್ದು, ತುಮಕೂರಿನಿಂದ ಬೆಂಗಳೂರಿಗೆ ತೆರಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಪ್ರಯಾಣ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಈ ರೈಲು ಆರಂಭಿಸಲಾಗಿದೆ ಎಂದು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.