ನವದೆಹಲಿ: ಕಳೆದ ವರ್ಷ ಪೂರ್ವ ಲಡಾಕ್ನ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಗೆ ಒಂದು ವರ್ಷವಾಗಿದ್ದು, ಈ ಹಿನ್ನೆಲೆಯಲ್ಲಿ ಇದರಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ರಕ್ಷಣಾ ಸಚಿವಾಲಯದ ಪಬ್ಲಿಕ್ ರಿಲೇಷನ್ ಯುನಿಟ್ ಶ್ರೀನಗರ, ಅಗ್ನಿಶಾಮಕ ಮತ್ತು ಫ್ಯೂರಿ ಕಾರ್ಪ್ಸ್ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಗಲ್ವಾನ್ ಗಲಭೆಯಲ್ಲಿ ಭಾರತದ 20 ಯೋಧರು ದೇಶದ ರಕ್ಷಣೆಗಾಗಿ ತಮ್ಮ ಪ್ರಾಣ ನೀಡಿದ್ದರು. ಭಾರೀ ಪ್ರಮಾಣದಲ್ಲಿ ಸಾವು, ನೋವುಗಳು ಸಂಭವಿಸಿದವು. ಈ ಘಟನೆ ನಡೆದು ಒಂದು ವರ್ಷವಾದ ಹಿನ್ನೆಲೆಯಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ಸಿಒಎಸ್ ,ಫೈರ್ ಆಂಡ್ ಫ್ಯೂರಿ ಕಾರ್ಪ್ಸ್ನ ಮೇಜರ್ ಜನರಲ್ ಆಕಾಶ್ ಕೌಶಿಕ್ ಈ ಸಂದರ್ಭದಲ್ಲಿ ಲೇಹ್ನ ಅಪ್ರತಿಮ ಯುದ್ಧ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿದ್ದಾರೆ.
ಅತ್ಯಂತ ಕ್ಲಿಷ್ಟಕರ, ಎತ್ತರದ ಪ್ರದೇಶದಲ್ಲಿ ಹೋರಾಡಿದ, ದೇಶಕ್ಕಾಗಿ ಸರ್ವೋಚ್ಚ ಸೇವೆ ನೀಡಿದ ವೀರ ಯೋಧರಿಗೆ ನಾವು ಸದಾ ಕೃತಜ್ಞರಾಗಿರಬೇಕು ಎಂದು ಇದೇ ಸಂದರ್ಭದಲ್ಲಿ ರಕ್ಷಣಾ ಸಚಿವಾಲಯ ತಿಳಿಸಿದೆ. ಅಲ್ಲದೆ ಈ ಘಟನೆಯ ಬಳಿಕ ಗಡಿ ಭಾಗಗಳಲ್ಲಿ ಭಾರತ ಮೂಲಸೌಕರ್ಯಗಳನ್ನು ಹೆಚ್ಚಿಸಿದೆ. ಹಾಗೆಯೇ ಚೀನಾದ ಸಂಭವನೀಯ ಆಕ್ರಮಣ ತಡೆಯುವ ನಿಟ್ಟಿನಲ್ಲಿಯೂ ಹೆಚ್ಚುವರಿ ಸೈನಿಕರನ್ನು ಗಡಿಭಾಗದಲ್ಲಿ ನಿಯೋಜನೆ ಮಾಡಲಾಗಿದೆ.
ಹಾಗೆಯೇ ಬಾರ್ಡರ್ ರೋಡ್ ಆರ್ಗನೈಸೇಷನ್ನ ಹಗಲು ರಾತ್ರಿ ಎನ್ನದ ನಿರಂತರ ಪ್ರಯತ್ನದ ಫಲವಾಗಿ ಸಂಪರ್ಕ ಸೌಕರ್ಯಗಳನ್ನು ಸಹ ಅಭಿವೃದ್ಧಿ ಮಾಡಲಾಗಿದೆ. ಇದು ರಕ್ಷಣಾ ಪಡೆಗೆ ರಕ್ಷಣಾ ಪರಿಕರ ಸಾಗಾಟ ಸೇರಿದಂತೆ ಇನ್ನಿತರ ಸಾಗಾಟ, ಸಂಪರ್ಕಕ್ಕೂ ಹೆಚ್ಚು ಅನುಕೂಲ ಒದಗಿಸಿದೆ. ಹಾಗೆಯೇ ರಕ್ಷಣಾ ಪಡೆಗಳಿಗೆ ವಸತಿ ಸೌಕರ್ಯ ಒದಗಿಸುವಲ್ಲಿಯೂ ದೇಶ ಗಣನೀಯ ಸಾಧನೆ ಮೆರೆದಿದೆ. ಅಲ್ಲದೆ ಗಡಿ ಭಾಗಗಳಿಗೆ ಅಗತ್ಯ ಸಂದರ್ಭದಲ್ಲಿ ಅವಶ್ಯಕ ಯೋಧರನ್ನು ಶೀಘ್ರ ತಲುಪುವಂತಾಗಲು ಅಗತ್ಯ ಅನುಕೂಲಗಳನ್ನು ಒದಗಿಸುವ ಮೂಲಕವೂ ದೇಶ ಒಂದೇ ವರ್ಷದಲ್ಲಿ ಮಹತ್ವದ ಸಾಧನೆ ಮೆರೆದಿದೆ.
Remembering the #Bravehearts of #Galwan
Maj Gen Akash Kaushik, Officiating GOC #FireandFuryCorps laid a wreath at #Leh War Memorial & paid homage to #Bravehearts who laid down their lives at #Galwan on 15 Jun 2020 while fighting for the #Nation.#IndianArmy pic.twitter.com/qMayWT8mhY
— ADG PI – INDIAN ARMY (@adgpi) June 15, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.