ಕೋಲ್ಕತಾ: ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್ಎಫ್) ನಿನ್ನೆ ಪಶ್ಚಿಮ ಬಂಗಾಳದ ಗಡಿಯಲ್ಲಿ ಚೀನಾದ ಪ್ರಜೆಯೊಬ್ಬನನ್ನು ಬಂಧಿಸಿದ್ದು, ಈತ ಚೀನಿ ಗೂಢಾಚಾರಿ ಎಂಬುದು ಈಗಾಗಲೇ ತಿಳಿದು ಬಂದಿದೆ. ಈತನನ್ನು ಮಾಲ್ಡಾದಿಂದ ಬಂಧಿಸಿದ ಒಂದು ದಿನದ ನಂತರ ಹಲವು ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.
ಮಾಲ್ಡಾದ ಸುಲ್ತಾನಪುರ ಇಂಡೋ-ಬಾಂಗ್ಲಾ ಗಡಿಯಲ್ಲಿ ಗುರುವಾರ ಭಾರತೀಯ ಭೂ ಪ್ರದೇಶಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಬಂಧಿಸಲ್ಪಟ್ಟಿದ್ದ ಚೀನಾದ ಪ್ರಜೆಯನ್ನು ಹಾನ್ ಜುನ್ವೇ ಎಂದು ಗುರುತಿಸಲಾಗಿದೆ.
ಹಲವಾರು ಗಂಟೆಗಳ ಕಠಿಣ ವಿಚಾರಣೆಯ ನಂತರ, ನಕಲಿ ದಾಖಲೆಗಳ ಮೂಲಕ ಸಂಗ್ರಹಿಸಿದ 1300 ಕ್ಕೂ ಹೆಚ್ಚು ಭಾರತೀಯ ಸಿಮ್ಗಳನ್ನು ತನ್ನ ಒಳ ಉಡುಪುಗಳಲ್ಲಿ ಅಡಗಿಸಿ ಕಳ್ಳಸಾಗಣೆ ಮಾಡಿದ್ದಾಗಿ ಈತ ಒಪ್ಪಿಕೊಂಡಿದ್ದಾನೆ.
ಕಳ್ಳಸಾಗಣೆ ಮಾಡಿದ ಸಿಮ್ ಅನ್ನು ನಂತರ ಚೀನಾದಲ್ಲಿ ಭಾರತೀಯ ಖಾತೆಗಳನ್ನು ಹ್ಯಾಕ್ ಮಾಡಲು ಮತ್ತು ಭಾರತದಲ್ಲಿ ಇತರ ಆರ್ಥಿಕ ವಂಚನೆಗಳನ್ನು ಮಾಡಲು ಬಳಸಲಾಗುತ್ತಿತ್ತು ಎಂದು ಈತ ಹೇಳಿದ್ದಾನೆ.
ಬಿಎಸ್ಎಫ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ಹಾನ್ ಜುನ್ವೇ ವಾಟೆಂಡ್ ಅಪರಾಧಿಯಾಗಿದ್ದಾನೆ ಮತ್ತು ಸಂಪೂರ್ಣ ವಿಚಾರಣೆ ನಡೆಸಿದಾಗ, ಹಲವು ಆಘಾತಕಾರಿ ಸಂಗತಿಗಳು ಮುನ್ನೆಲೆಗೆ ಬಂದಿವೆ. ಅವನು ಈವರೆಗೆ ಭಾರತದಿಂದ ನಕಲಿ ದಾಖಲೆಗಳನ್ನು ಬಳಸಿ ಸುಮಾರು 1300 ಭಾರತೀಯ ಸಿಮ್ಗಳನ್ನು ಚೀನಾಕ್ಕೆ ತೆಗೆದುಕೊಂಡು ಹೋಗಿದ್ದಾನೆ. ಜುನ್ವೇ ಮತ್ತು ಅವನ ಸಹಚರರು ಸಿಮ್ ಅನ್ನು ಒಳ ಉಡುಪುಗಳಲ್ಲಿ ಮರೆಮಾಡಿ ಸಾಗಾಣೆ ಮಾಡುತ್ತಿದ್ದರು ಮತ್ತು ಇವುಗಳನ್ನು ಚೀನಾಕ್ಕೆ ಕಳುಹಿಸುತ್ತಿದ್ದರು. ಈ ಸಿಮ್ಗಳನ್ನು ಖಾತೆಗಳನ್ನು ಹ್ಯಾಕ್ ಮಾಡಲು ಮತ್ತು ಹಲವಾರು ರೀತಿಯ ಆರ್ಥಿಕ ವಂಚನೆಗಳನ್ನು ಮಾಡಲು ಬಳಸಲಾಗುತ್ತಿತ್ತು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.