ನವದೆಹಲಿ: ಕೇಂದ್ರ ಸರ್ಕಾರದ ಉತ್ಪಾದನಾ ಆಧಾರಿತ ಪ್ರೋತ್ಸಾಹಕ ಯೋಜನೆಯಡಿ ಸೌರ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ ಲಿಮಿಟೆಡ್ (Indian Renewable Energy Development Agency Limited) ಬಿಡ್ಗಳನ್ನು ಆಹ್ವಾನಿಸಿದೆ.
ಸೋಲಾರ್ ಫೋಟೋ-ವೋಲ್ಟಾಯಿಕ್ ಮಾಡ್ಯೂಲ್ಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಈ ಹಿಂದೆ 4,500 ಕೋಟಿ ರೂಪಾಯಿಗಳ ಯೋಜನೆಗೆ ಅನುಮೋದನೆ ನೀಡಿತ್ತು.
ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು IREDAಯನ್ನು ಈ ಯೋಜನೆಗೆ ಅನುಷ್ಠಾನಗೊಳಿಸುವ ಏಜೆನ್ಸಿಯಾಗಿ ನೇಮಿಸಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಈ ತಿಂಗಳ 30 ಆಗಿದೆ. ಯಶಸ್ವಿ ಬಿಡ್ಡುದಾರರ ಆಯ್ಕೆ ಪ್ರಕ್ರಿಯೆ ಜುಲೈ 30 ರೊಳಗೆ ಪೂರ್ಣಗೊಳ್ಳುತ್ತದೆ.
ಅರ್ಜಿದಾರರು ಯೋಜನೆಯಡಿ ನಿಗದಿಪಡಿಸಿದ ಸಂಪೂರ್ಣ ಸಾಮರ್ಥ್ಯಕ್ಕಾಗಿ ಬ್ರೌನ್ಫೀಲ್ಡ್ ಅಥವಾ ಗ್ರೀನ್ಫೀಲ್ಡ್ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಸಚಿವಾಲಯ ತಿಳಿಸಿದೆ. ಯೋಜನೆಯಡಿಯಲ್ಲಿ ಬ್ರೌನ್ಫೀಲ್ಡ್ ಮತ್ತು ಗ್ರೀನ್ಫೀಲ್ಡ್ ಸೌಲಭ್ಯದ ಮಿಶ್ರಣವನ್ನು ಹೊಂದಿಸಲು ಅರ್ಜಿದಾರರಿಗೆ ಅವಕಾಶವಿಲ್ಲ. ಉತ್ಪಾದನಾ ಘಟಕದ ಕನಿಷ್ಠ ಸಾಮರ್ಥ್ಯವು ಒಂದು ಸಾವಿರ ಮೆಗಾವ್ಯಾಟ್ ಆಗಿರಬೇಕು. ಪಿಎಲ್ಐ ಅನ್ನು ಯಶಸ್ವಿ ಅರ್ಜಿದಾರರಿಗೆ ವಾರ್ಷಿಕವಾಗಿ ಐದು ವರ್ಷಗಳವರೆಗೆ ವಿತರಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.