ನವದೆಹಲಿ: ಟ್ವಿಟರ್ ಅನ್ನು ನಿಷೇಧ ಮಾಡಿರುವ ನೈಜೀರಿಯ ಸರ್ಕಾರವು ಭಾರತದ ಕೂ ಆ್ಯಪ್ ಅನ್ನು ಬಳಸಲು ಅನುಮತಿಯನ್ನು ನೀಡಿದೆ. ಮಾತ್ರವಲ್ಲದೇ, ನೈಜೀರಿಯ ಸರಕಾರವು ಈಗಾಗಲೇ ಕೂ ಆ್ಯಪ್ ನಲ್ಲಿ ತನ್ನ ಖಾತೆಯನ್ನು ಕೂಡ ತೆರೆದಿದೆ.
ಈ ಬೆಳವಣಿಗೆಯ ಬಗ್ಗೆ ಕೂ ಸಹಸಂಸ್ಥಾಪಕ ಆರ್ ಅಪ್ರಮೇಯ ಅವರು ಮಾಹಿತಿ ನೀಡಿದ್ದಾರೆ.
ನೀತಿ ಉಲ್ಲಂಘನೆಯ ಆರೋಪದಲ್ಲಿ ನೈಜೀರಿಯ ಸರಕಾರವು ಜೂನ್ 2ರಂದು ಟ್ವಿಟರ್ ಅನ್ನು ಅನಿರ್ದಿಷ್ಟಾವಧಿ ನಿಷೇಧಿಸಿದೆ. ಅದರ ಬಳಿಕ ಕೂ ಆ್ಯಪ್ ಅಲ್ಲಿ ಲಗ್ಗೆ ಇಟ್ಟು ನಿಧಾನಕ್ಕೆ ನೆಲೆ ಭದ್ರಪಡಿಸಿಕೊಳ್ಳುತ್ತಿದೆ.
ಭಾರತದಲ್ಲೂ ಟ್ವಿಟರ್ ಹೊಸ ಐಟಿ ನಿಯಮಗಳಿಗೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ಸಂಘರ್ಷಕ್ಕಿಳಿದಿತ್ತು.
A very warm welcome to the official handle of the Government of Nigeria on @kooindia! Spreading wings beyond India now. 🙂 @mayankbidawatka pic.twitter.com/9ufSOKI7sd
— Aprameya R (@aprameya) June 10, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.