ಬೆಂಗಳೂರು: ವಿಶ್ವದ ಟಾಪ್ ಸಂಶೋಧನಾ ವಿಶ್ವವಿದ್ಯಾಲಯಗಳ ಪೈಕಿ ಬೆಂಗಳೂರಿನ ಐಐಎಸ್ಸಿ ನಂಬರ್ 1 ಸ್ಥಾನ ಪಡೆದುಕೊಂಡಿದೆ.
ಕ್ಯೂಎಸ್ ಕ್ವಾಕರೇಲಿ ಸೀಮಂಡ್ಸ್ ನಿಂದ ಜಾಗತಿಕ ಅಂತರಾಷ್ಟ್ರೀಯ ಶ್ರೇಯಾಂಕಗಳ ಪಟ್ಟಿ ಬಿಡುಗಡೆಯಾಗಿದೆ. ಇದರಲ್ಲಿ 2022 ಕ್ಕೆ ಸಂಬಂಧಿಸಿದಂತೆ ವಿಶ್ವದ 200 ಉನ್ನತ ವಿವಿಗಳ ಪಟ್ಟಿ ಪ್ರಕಟವಾಗಿದ್ದು, ಇದರಲ್ಲಿ ಸಂಶೋಧನೆಗೆ ಸಂಬಂಧಿಸಿದಂತೆ ಬೆಂಗಳೂರು ಐಐಎಸ್ಸಿಗೆ ನಂಬರ್ 1 ಪಟ್ಟ ದೊರೆತಿದೆ.
ಕ್ಯೂಎಸ್ ಕ್ವಾಕರೇಲಿ ಸೀಮಂಡ್ಸ್ ಜಾಗತಿಕ ಉನ್ನತ ಶಿಕ್ಷಣ ವಿಶ್ಲೇಷಣಾ ಸಂಸ್ಥೆಯಾಗಿದೆ. ಇದು ತನ್ನ 18 ನೇ ಆವೃತ್ತಿ ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತದ ಮೂರು ವಿವಿಗಳು ಸ್ಥಾನ ಪಡೆದಿವೆ. ಐಐಟಿ ಮುಂಬೈ – 177, ಐಐಟಿ ನವದೆಹಲಿ – 185 ನೇ ಸ್ಥಾನ ಪಡೆದುಕೊಂಡಿದೆ. ಭಾರತದ ವಿವಿಗಳ ಈ ಸಾಧನೆಗೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರೂ ಈ ವಿಶ್ವವಿದ್ಯಾಲಯಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Congratulations to @iiscbangalore, @iitbombay and @iitdelhi. Efforts are underway to ensure more universities and institutions of India scale global excellence and support intellectual prowess among the youth. https://t.co/NHnQ8EvN28
— Narendra Modi (@narendramodi) June 9, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.