News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

6,000 ಕೋಟಿ ರೂ ಮೌಲ್ಯದ ವಾಯು ರಕ್ಷಣಾ ಬಂದೂಕು, ಪರಿಕರ ಖರೀದಿಗೆ ಅನುಮೋದನೆ

ನವದೆಹಲಿ: ವಾಯು ರಕ್ಷಣಾ ವ್ಯವಸ್ಥೆಗೆ ಉತ್ತೇಜನ ನೀಡುವ ಸಲುವಾಗಿ, ರಕ್ಷಣಾ ಸಚಿವಾಲಯವು ಸೇನೆಯ ವಾಯು ರಕ್ಷಣಾ ಬಂದೂಕುಗಳ ಆಧುನೀಕರಣಕ್ಕೆ ಸಂಬಂಧಿಸಿದ ಪ್ರಸ್ತಾಪಗಳಿಗೆ ಅನುಮೋದನೆ ನೀಡಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ)ಯ ಸಭೆಯಲ್ಲಿ, ಸಶಸ್ತ್ರ ಪಡೆಗಳ ಆಧುನೀಕರಣ ಮತ್ತು ಕಾರ್ಯಾಚರಣೆಯ ಅಗತ್ಯಗಳಿಗಾಗಿ ವಿವಿಧ ಸಲಕರಣೆಗಳ ಬಂಡವಾಳ ಸ್ವಾಧೀನಕ್ಕೆ ಸಂಬಂಧಿಸಿದ ಪ್ರಸ್ತಾಪಗಳಿಗೆ ಅನುಮೋದನೆ‌ ನೀಡಲಾಗಿದ್ದು, ಇದರ ಅಂದಾಜು ಮೊತ್ತ 6,000 ಕೋಟಿ ರೂ ಎನ್ನಲಾಗಿದೆ.

ಭಾರತೀಯ ಸೇನೆಯ ವಾಯು ರಕ್ಷಣಾ ಬಂದೂಕುಗಳ ಆಧುನೀಕರಣಕ್ಕೆ ಬೇಡಿಕೆ ಬಹುಕಾಲದಿಂದ ಬಾಕಿ ಉಳಿದಿದೆ ಎಂಬುದನ್ನು ಗಮನಿಸಿರುವ ರಕ್ಷಣಾ ಸಚಿವಾಲಯ, ಆಧುನೀಕರಣ ಪ್ರಸ್ತಾಪಗಳಿಗೆ ಅನುಮೋದನೆ ನೀಡುತ್ತಿದೆ.

ಈ ಹಿಂದೆ ವಿದೇಶಿ ಮೂಲಗಳಿಂದ ಮಾತ್ರ ಸಂಗ್ರಹಿಸಲಾಗುತ್ತಿದ್ದ ಪರಿಕರಗಳನ್ನು ಭಾರತದಲ್ಲಿ ನಿರ್ಮಿಸಲು ಉತ್ತೇಜನ ನೀಡಲಾಗುತ್ತಿದೆ. ರಕ್ಷಣಾ ಸಚಿವಾಲಯವು ‘ಆತ್ಮನಿರ್ಭರ ಭಾರತ’ ‘ಮತ್ತು’ ಮೇಕ್ ಇನ್ ಇಂಡಿಯಾ’ ಅಡಿಯಲ್ಲಿ ರಕ್ಷಣಾ ಸಾಮಾಗ್ರಿಗಳ ಉತ್ಪಾದನೆಗೆ ಹೆಚ್ಚು ಒತ್ತು ನೀಡುತ್ತಿದೆ. ಸುಮಾರು 12ಕ್ಕೂ ಅಧಿಕ ಭಾರತೀಯ ಕಂಪನಿಗಳಿಂದ ಇದಕ್ಕೆ ಉತ್ಸಾಹಭರಿತ ಪ್ರತಿಕ್ರಿಯೆ ಬರುತ್ತಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top