ನವದೆಹಲಿ: ಕೋವಿಡ್-19 ಸವಾಲುಗಳ ಹೊರತಾಗಿಯೂ, ರೈಲ್ವೆ ಕಳೆದ ವರ್ಷ ಸೆಪ್ಟೆಂಬರ್ನಿಂದ ಈ ವರ್ಷದ ಮೇ ವರೆಗೆ ಸತತ ಒಂಬತ್ತು ತಿಂಗಳಲ್ಲಿ ದಾಖಲೆಯ ಸರಕು ಸಾಗಣೆಯನ್ನು ಮಾಡಿದೆ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ಸುನೀತ್ ಶರ್ಮಾ ಹೇಳಿದ್ದಾರೆ.
ಇಂದು ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶರ್ಮಾ, 2020-21ರಲ್ಲಿ ಅತಿ ಹೆಚ್ಚು 1233 ಮಿಲಿಯನ್ ಟನ್ ಲೋಡ್ ಸಾಗಾಣಿಕೆಯ ಮೈಲಿಗಲ್ಲು ಸಾಧಿಸಲಾಗಿದೆ ಎಂದಿದ್ದಾರೆ.
59 ಮಾರ್ಗಗಳಲ್ಲಿ 738 ಕಿಸಾನ್ ರೈಲುಗಳ ಮೂಲಕ ಸುಮಾರು 2.33 ಲಕ್ಷ ಟನ್ ಕೃಷಿ ಉತ್ಪನ್ನಗಳನ್ನು ಸಾಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಾಗಿಸಲಾದ ಪ್ರಮುಖ ಸರಕುಗಳೆಂದರೆ ಈರುಳ್ಳಿ, ಆಲೂಗಡ್ಡೆ, ಬಾಳೆಹಣ್ಣು, ಕ್ಯಾಪ್ಸಿಕಂ, ಕಿತ್ತಳೆ ಮತ್ತು ಇತರ ಹಣ್ಣುಗಳು ಮತ್ತು ತರಕಾರಿಗಳು ಸೇರಿವೆ. ಕಳೆದ ವರ್ಷ ಆಗಸ್ಟ್ 7 ರಂದು ಬಿಹಾರದ ದೇವಲಾಲಿ, ಮಹಾರಾಷ್ಟ್ರ ಮತ್ತು ದಾನಾಪುರ ನಡುವೆ ಮೊದಲ ಕಿಸಾನ್ ರೈಲನ್ನು ಆರಂಭಿಸಲಾಯಿತು. ಬೆಗ ಹಾಳಾಗಬಹುದಾದ ಕೃಷಿ ಉತ್ಪನ್ನವನ್ನು ಸಾಗಿಸಲು ರೈಲ್ವೆ ಕಿಸಾನ್ ರೈಲು ರೈಲು ಸೇವೆಗಳನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದ್ದಾರೆ.
ರೈಲ್ವೆ 23,658 ಟನ್ಗಿಂತ ಹೆಚ್ಚು ದ್ರವ ವೈದ್ಯಕೀಯ ಆಮ್ಲಜನಕವನ್ನು ದೇಶಾದ್ಯಂತ ಹದಿನೈದು ರಾಜ್ಯಗಳಿಗೆ ತಲುಪಿಸಿದೆ ಎಂದು ಶರ್ಮಾ ಹೇಳಿದ್ದಾರೆ. 593 ಆಕ್ಸಿಜನ್ ಎಕ್ಸ್ಪ್ರೆಸ್ಗಳು ಈವರೆಗೆ ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಿವೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.