ಬೆಂಗಳೂರು: ವಿದೇಶಕ್ಕೆ ಅಧ್ಯಯನ ಮತ್ತು ಉದ್ಯೋಗಕ್ಕಾಗಿ ತೆರಳುವ ಜನರಿಗೆ ಜೂ. 1 ರಿಂದ ಕೊರೋನಾ ಲಸಿಕೆ ಪಡೆಯಬಹುದು ಎಂದು ಉಪಮುಖ್ಯಮಂತ್ರಿ ಡಾ ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.
ಬೆಂಗಳೂರು ನಗರ ವಿವಿ ಆವರಣದಲ್ಲಿ ಇಂದು 3 ಗಂಟೆಯಿಂದ ಈ ವರ್ಗದವರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಆದ್ಯತಾ ಗುಂಪಿನ ಕೋಟಾದಡಿಯಲ್ಲಿ ವಿದೇಶಗಳಿಗೆ ತೆರಳುವವರಿಗೆ ಲಸಿಕೆ ನೀಡಲಾಗುತ್ತದೆ. ಅಗತ್ಯ ಇರುವವರು ಈ ಲಸಿಖೆಯ ಸದುಪಯೋಗ ಪಡೆದುಕೊಳ್ಳುವಂತೆ ಅವರು ಹೇಳಿದ್ದಾರೆ.
ಹಾಗೆಯೇ ವಿದೇಶಗಳಿಗೆ ತೆರಳುವ ಪ್ರಮಾಣಪತ್ರ ಸಹ ಲಸಿಕೆ ಪಡೆಯುವ ಸಂದರ್ಭದಲ್ಲಿ ಹೊಂದಿರಲೇಬೇಕು. ವಿದೇಶದಲ್ಲಿ ನಿರತರಾಗಿರುವವರ ಬೇಡಿಕೆಯ ಅನ್ವಯ ಈ ಲಸಿಕೆ ನೀಡುವ ಕ್ರಮಕ್ಕೆ ಮುಂದಾಗಿರುವುದಾಗಿ ಅವರು ಹೇಳಿದ್ದಾರೆ. ಆಧಾರ್, ವೋಟರ್ ಸೇರಿದಂತೆ ವಿದೇಶದಲ್ಲಿ ನೆಲೆಸಿರುವುದಕ್ಕೆ ಸಂಬಂಧಿಸಿದಂತೆ ಇರುವ ದಾಖಲೆಗಳನ್ನು ಹೊಂದಿರತಕ್ಕದ್ದು ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.