ಜಿನಿವಾ: ಭಾರತದಲ್ಲಿ ಮೊದಲು ಪತ್ತೆಯಾದ ಕೋವಿಡ್ ರೂಪಾಂತರಕ್ಕೆ ‘ಕಪ್ಪಾ’ ಮತ್ತು ‘ಡೆಲ್ಟಾ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೆಸರಿಡುತ್ತಿದೆ. ಈ ರೂಪಾಂತರಕ್ಕೆ ಪ್ರಸ್ತುತ B.1.617.1 ಮತ್ತು B.1.617.2 ಎಂದು ಕರೆಯಲಾಗುತ್ತದೆ.
ಸಾರ್ಸ್ ಕೋವ್2 ಹೆಸರನ್ನು ಬಳಸಲು ಅನುಕೂಲವಾಗುವಂತೆ ಮತ್ತು ಸದ್ಯ ಇರುವ ವೈಜ್ಞಾನಿಕ ಹೆಸರಿಗೆ ರಿಪ್ಲೇಸ್ ಮಾಡದೆ ಹೊಸ ಲೇಬಲ್ ಹಾಕುತ್ತಿದ್ದೇವೆ. ಇದು ಸಾರ್ವಜನಿಕ ಚರ್ಚೆಯಲ್ಲಿ ಸಹಾಯ ಮಾಡುವ ಗುರಿಯನ್ನು ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಭಾರತದಲ್ಲಿ ಕಂಡುಬಂದ ಕೋವಿಡ್ ರೂಪಾಂತರ B.617.1ಗೆ ಕಪ್ಪಾ ಎಂದು, B1.617.2 ರೂಪಾಂತರಕ್ಕೆ ಡೆಲ್ಟಾ ಎಂದು ಕರೆಯಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಇಂಡಿಯನ್ ವೆರಿಯಂಟ್ ಎಂದು ಸಾಮಾಜಿಕ ಮಾಧ್ಯಗಳಲ್ಲಿ ಬಳಕೆ ಮಾಡುವುದಕ್ಕೆ ಕೇಂದ್ರ ಆರೋಗ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿತ್ತು, ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಇಂಡಿಯನ್ ವೆರಿಯಂಟ್ ಎಂದು ಕರೆದಿಲ್ಲ ಎಂದು ಸ್ಪಷ್ಟನೆ ನೀಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.