ನವದೆಹಲಿ: ಭಾರತೀಯ ಸೇನೆಯು ಶೀಘ್ರದಲ್ಲೇ ನಾಲ್ಕು ಹೆರಾನ್ ಟಿಪಿ ಡ್ರೋನ್ಗಳನ್ನು ಇಸ್ರೇಲ್ನಿಂದ ಗುತ್ತಿಗೆಗೆ ಪಡೆಯಲಿದೆ, ಇದನ್ನು ದೀರ್ಘ ಕಣ್ಗಾವಲು ಕಾರ್ಯಗಳಿಗಾಗಿ ಚೀನಾದೊಂದಿಗಿನ ಗಡಿ ನಿಯಂತ್ರಣ ರೇಖೆಯಲ್ಲಿ ನಿಯೋಜಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ರಫೆಲ್ (14 ಮೀಟರ್)ನಷ್ಟೇ ಉದ್ದ ಇರುವ ಮತ್ತು ಇದಕ್ಕಿಂತ ದುಪ್ಪಟ್ಟು ವಿಂಗ್ಸ್ಪ್ಯಾನ್ ಇರುವ ಹೆರಾನ್ ಟಿಪಿಯನ್ನು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ಅಭಿವೃದ್ಧಿಪಡಿಸಿದೆ. ಇದು ಎಲ್ಲಾ ಹವಾಮಾನ ಕಾರ್ಯತಂತ್ರದ ಕಾರ್ಯಗಳಿಗಾಗಿ ಮಧ್ಯಮ ಎತ್ತರದ ದೀರ್ಘ ಸಹಿಷ್ಣುತೆ (Medium Altitude Long Endurance) ಮಾನವರಹಿತ ವೈಮಾನಿಕ ವ್ಯವಸ್ಥೆ (Unmanned Aerial System) ಆಗಿದೆ. ಹೆರಾನ್ ಟಿಪಿ ಡ್ರೋನ್ಗಳನ್ನು ಅಗತ್ಯವಿದ್ದರೆ ಶಸ್ತ್ರಸಜ್ಜಿತವಾಗೊಳಿಸಬಹುದು, ಆದರೆ ಭಾರತವು ಗುತ್ತಿಗೆಗೆ ಪಡೆಯುತ್ತಿರುವುದು ಶಸ್ತ್ರಾಸ್ತ್ರ ರಹಿತ ಆವೃತ್ತಿಯನ್ನು ಎಂದು ಮೂಲಗಳು ತಿಳಿಸಿವೆ.
“ಮೊದಲ ಎರಡು ಡ್ರೋನ್ಗಳನ್ನು ಶೀಘ್ರದಲ್ಲೇ ಭಾರತಕ್ಕೆ ತಲುಪಿಸಲಾಗುತ್ತಿದೆ. ಇತರ ಎರಡನ್ನು ಮೂರು ತಿಂಗಳ ಅಂತರದ ನಂತರ ತಲುಪಿಸಲಾಗುತ್ತದೆ” ಎಂದು ಮೂಲಗಳು ತಿಳಿಸಿವೆ.
ಈ ವರ್ಷದ ಆರಂಭದಲ್ಲಿ ಗುತ್ತಿಗೆಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಗುತ್ತಿಗೆ ಮೂರು ವರ್ಷಗಳ ಅವಧಿಗೆ ಇದ್ದು, ಇನ್ನೂ ಎರಡು ವರ್ಷಗಳ ಆಯ್ಕೆಯನ್ನು ಹೊಂದಿದೆ. ಗುತ್ತಿಗೆ ವೆಚ್ಚಗಳನ್ನು ಬಹಿರಂಗಪಡಿಸಲಾಗಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.