News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2021ರ ಅಂತ್ಯಕ್ಕೆ ಭಾರತಕ್ಕೆ ಆಗಮಿಸಲಿದೆ ರಷ್ಯಾದ ಎಸ್ -400 ವಾಯು ರಕ್ಷಣಾ ಕ್ಷಿಪಣಿ

ನವದೆಹಲಿ: ರಷ್ಯಾದ ಎಸ್ -400 ಟ್ರಯಂಫ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಮೊದಲ ರೆಜಿಮೆಂಟ್ ಅನ್ನು ಈ ವರ್ಷದ ಅಕ್ಟೋಬರ್-ಡಿಸೆಂಬರ್ ವೇಳೆಗೆ ಭಾರತಕ್ಕೆ ತಲುಪಿಸಲಾಗುವುದು ಎಂದು ರಷ್ಯಾದ  ಶಸ್ತ್ರಾಸ್ತ್ರ ರಫ್ತುದಾರ ರೊಸೊಬೊರೊನೆಕ್ಸ್‌ಪೋರ್ಟ್‌ನ ಉನ್ನತ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

“ಎಲ್ಲವೂ ನಿಗದಿಯ ಪ್ರಕಾರ ನಡೆಯುತ್ತಿದೆ. ಎಸ್ -400 ವಿಮಾನ ನಿರೋಧಕ ಕ್ಷಿಪಣಿ ವ್ಯವಸ್ಥೆಗಳ ಮೊದಲ ವಿತರಣೆ ಈ ವರ್ಷ ಅಕ್ಟೋಬರ್-ಡಿಸೆಂಬರ್‌ನಲ್ಲಿ ನಡೆಯಲಿವೆ” ಎಂದು ರೊಸೊಬೊರೊನೆಕ್ಸ್‌ಪೋರ್ಟ್ ಸಿಇಒ ಅಲೆಕ್ಸಾಂಡರ್ ಮಿಖೆಯೆವ್ ಹೇಳಿದ್ದಾರೆ.

ಎಸ್ -400 ವಿಶ್ವದ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಗಳಲ್ಲಿ ಒಂದಾಗಿದೆ ಮತ್ತು 400 ಕಿ.ಮೀ ವ್ಯಾಪ್ತಿಯಲ್ಲಿ ಮತ್ತು 30 ಕಿ.ಮೀ ಎತ್ತರದಲ್ಲಿ ಗುರಿಗಳನ್ನು ಇದು ಹೊಡೆಯಬಲ್ಲದು.

ಯುಎಸ್ ನಿರ್ಬಂಧಗಳ ಬೆದರಿಕೆಯ ಹೊರತಾಗಿಯೂ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಯ ಐದು ರೆಜಿಮೆಂಟ್‌ಗಳನ್ನು ಖರೀದಿಸಲು 2018 ರ ಅಕ್ಟೋಬರ್ 5 ರಂದು ನವದೆಹಲಿಯಲ್ಲಿ ನಡೆದ 19 ನೇ ಭಾರತ-ರಷ್ಯಾ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಭಾರತವು ರಷ್ಯಾದೊಂದಿಗೆ  5 ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿತ್ತು.

ಈ ಸುಧಾರಿತ ವಾಯು ರಕ್ಷಣಾ ವ್ಯವಸ್ಥೆಗೆ ಭಾರತ ಈಗಾಗಲೇ $850 ಮಿಲಿಯನ್ ಪಾವತಿಸಿದೆ.

 ಐದು ಎಸ್ -400 ವಾಯು ರಕ್ಷಣಾ ವ್ಯವಸ್ಥೆಗಳನ್ನು 2025 ರ ವೇಳೆಗೆ ಭಾರತಕ್ಕೆ ತಲುಪಿಸಲಾಗುವುದು ಎಂದು ರಷ್ಯಾ‌ 2020 ರ ಜನವರಿಯಲ್ಲಿ ಹೇಳಿತ್ತು

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top